ಗುವಾಹಟಿ ಹೊಟೇಲ್ ನಲ್ಲಿ ಶಿಂಧೆ ಕ್ಯಾಂಪ್ ಮಾಡಿದ ಖರ್ಚು ಎಷ್ಟು ಗೊತ್ತೇ?

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹಾಗೂ ಅವರೊಂದಿಗಿದ್ದ "ಮಾಜಿ ರೆಬೆಲ್", ಹೊಸ ಸರ್ಕಾರ ರಚಿಸಲು ನೆರವಾಗಿರುವ ಶಾಸಕರು ಗುವಾಹಟಿಯಲ್ಲಿ ತಂಗಿದ್ದ ಹೊಟೇಲ್ ನಿಂದ ಹೊರಬಂದಿದ್ದು ಬಿಲ್ ಪಾವತಿಸಿದ್ದಾರೆ. 
ಏಕನಾಥ್ ಶಿಂಧೆ
ಏಕನಾಥ್ ಶಿಂಧೆ

ನವದೆಹಲಿ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹಾಗೂ ಅವರೊಂದಿಗಿದ್ದ "ಮಾಜಿ ರೆಬೆಲ್", ಹೊಸ ಸರ್ಕಾರ ರಚಿಸಲು ನೆರವಾಗಿರುವ ಶಾಸಕರು ಗುವಾಹಟಿಯಲ್ಲಿ ತಂಗಿದ್ದ ಹೊಟೇಲ್ ನಿಂದ ಹೊರಬಂದಿದ್ದು ಬಿಲ್ ಪಾವತಿಸಿದ್ದಾರೆ. 

ಹೊಟೇಲ್ ನ ಅಧಿಕಾರಿಗಳು ಬಿಲ್ ಬಗ್ಗೆ ಹೆಚ್ಚಿನ ಮಾಹಿತಿ ನೀಡದೇ ಇದ್ದರೂ ಸಹ, ಮೂಲಗಳ ಪ್ರಕಾರ 68-70 ರೂಪಾಯಿಗಳ ಬಿಲ್ ನ್ನು ಶಿಂಧೆ ಟೀಂ ರ್ಯಾಡಿಸನ್ ಬ್ಲೂ ಹೊಟೇಲ್ ಗೆ ಪಾವತಿಸಿದೆ ಎಂದು ತಿಳಿದುಬಂದಿದೆ. ಹೋಟೆಲ್ ನ ಬೇರೆ ಬೇರೆ ಫ್ಲೋರ್ ಗಳಲ್ಲಿ ಮಹಾರಾಷ್ಟ್ರ ಶಾಸಕರಿಗೆ ಹಾಗೂ ಅವರ ಸಹವರ್ತಿಗಳಿಗಾಗಿ ರೂಮ್ ಗಳನ್ನು ಕಾಯ್ದಿರಿಸಲಾಗಿತ್ತು.

ಹೋಟೆಲ್ ಹಾಗೂ ಅದರ ರೆಸ್ಟೋರೆಂಟ್ಸ್, ಬಾಂಕ್ವೆಟ್ ಹಾಗೂ ಇತರ ಸೇವೆಗಳನ್ನು ಜೂ.22-29 ವರೆಗೆ ನಾನ್ ರೆಸಿಡೆಂಟ್ ಗೆಸ್ಟ್ ಗಳಿಗೆ ಸ್ಥಗಿತಗೊಳಿಸಲಾಗಿತ್ತು.

ಮಹಾರಾಷ್ಟ್ರದ ಶಾಸಕರು ನಮ್ಮ ಹೋಟೆಲ್ ಗಳ ಅತಿಥಿಗಳಾಗಿದ್ದರು. ಇಲ್ಲಿಂದ ಹೊರಡುವ ಮುನ್ನ ಪಾವತಿಗಳನ್ನು ಬಾಕಿ ಉಳಿಸಿಕೊಂಡಿಲ್ಲ ಎಂದು ಹೋಟೆಲ್ ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರ್ಯಾಡಿಸನ್ ಬ್ಲೂ ನಲ್ಲಿ ಸುಪೀರಿಯರ್ ರೂಮ್ ಗಳಿಗೆ 7,500 ರೂಪಾಯಿ, ಡೀಲೆಕ್ಸ್ ರೂಮ್ ಗಳಿಗೆ 8,500 ರೂಪಾಯಿಗಳ ಬಾಡಿಗೆ ಇದೆ. ಶಿಂಧೆ ಬಣಕ್ಕೆ ಡಿಸ್ಕೌಂಟ್ ನೀಡಿದ ಬಳಿಕ 68 ಲಕ್ಷ ರೂಪಾಯಿ ಬಿಲ್ ನೀಡಲಾಗಿತ್ತು. 55 ಡಿಲಕ್ಸ್ ರೂಮ್ ಗಳನ್ನು ಬುಕ್ ಮಾಡಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com