ಕಾಳಿ ದೇವಿ ಎಂದರೆ ನನಗೆ ಮಾಂಸ ತಿನ್ನುವ, ಮದ್ಯ ಸ್ವೀಕರಿಸುವ ದೇವತೆ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ!

ಕಾಳಿ ದೇವಿ ನನಗೆ ಮಾಂಸ ತಿನ್ನುವ, ಮದ್ಯವನ್ನು ಸ್ವೀಕರಿಸುವ ದೇವತೆ ಎಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಎಂದು ಸಿಗರೇಟ್ ಸೇದುತ್ತಿರುವ ಚಿತ್ರ ಪೋಸ್ಟರ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಮಹುವಾ ಮೊಯಿತ್ರಾ
ಮಹುವಾ ಮೊಯಿತ್ರಾ

ಮುಂಬೈ: ಕಾಳಿ ದೇವಿ ನನಗೆ ಮಾಂಸ ತಿನ್ನುವ, ಮದ್ಯವನ್ನು ಸ್ವೀಕರಿಸುವ ದೇವತೆ ಎಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಎಂದು ಸಿಗರೇಟ್ ಸೇದುತ್ತಿರುವ ಚಿತ್ರ ಪೋಸ್ಟರ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಕಾಳಿ ನನಗೆ ಮಾಂಸ ತಿನ್ನುವ, ಮದ್ಯವನ್ನು ಸ್ವೀಕರಿಸುವ ದೇವತೆ. ನಿಮ್ಮ ದೇವತೆಯನ್ನು ಕಲ್ಪಿಸಿಕೊಳ್ಳುವ ಸ್ವಾತಂತ್ರ್ಯ ನಿಮಗಿದೆ. ಕೆಲವು ಸ್ಥಳಗಳಲ್ಲಿ ವಿಸ್ಕಿಯನ್ನು ದೇವರಿಗೆ ಅರ್ಪಿಸಲಾಗುತ್ತದೆ ಮತ್ತು ಕೆಲವು ಸ್ಥಳಗಳಲ್ಲಿ ಅದು ಧರ್ಮನಿಂದೆಯಾಗಿರುತ್ತದೆ ಎಂದು ಮೊಯಿತ್ರಾ ಹೇಳಿದರು.

ಸಿಗರೇಟ್ ಸೇದುತ್ತಿರುವ ಕಾಳಿ ಮಾತೆಯ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ನಟಿ, ನಿರ್ದೇಶಕಿ, ಕವಯತ್ರಿ ಲೀನಾ ಮಣಿಮೇಕಲೈ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ಕವಯತ್ರಿ ಲೀನಾ ಮಣಿಮೇಕಲೈ ಅವರು ಕಾಳಿ ಎಂಬ ಸಾಕ್ಷ್ಯಚಿತ್ರ ನಿರ್ದೇಶಿಸಿದ್ದು, ಸಿಗರೇಟ್ ಸೇದುತ್ತಿರುವ ಕಾಳಿ ಮಾತೆಯ ಪೋಸ್ಟರ್ ಅನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟರ್ ವೈರಲ್ ಆಗಿದ್ದು, ಈ ಕೂಡಲೇ ಸಿನಿ ನಿರ್ಮಾಣಕಾರರನ್ನು ಬಂಧಿಸಬೇಕೆಂದು ನೆಟ್ಟಿಗರು ಒತ್ತಾಯಿಸುತ್ತಿದ್ದರು.

ಒಂದೆಡೆ ಕಾಳಿ ಮಾತೆ ಸಿಗರೇಟ್ ಸೇದುತ್ತಿದ್ದರೆ, ಇನ್ನೊಂದು ಕೈಯಲ್ಲಿ ಎಲ್ ಜಿಬಿಟಿಕ್ಯೂ ಸಮುದಾಯದ ಧ್ವಜ ಹಿಡಿದಿರುವ ರೀತಿಯಲ್ಲಿ ಕಾಳಿ ಮಾತೆಯ ಅವತಾರವನ್ನು ಪೋಸ್ಟರ್ ನಲ್ಲಿ ಚಿತ್ರಿಸಲಾಗಿದ್ದು, ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com