ಕಂಟೆಂಟ್ ನಿರ್ಬಂಧಿಸುವ ಕೇಂದ್ರದ "ನಿರಂಕುಶ" ಆದೇಶದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಟ್ವಿಟರ್

ತನ್ನ ವೇದಿಕೆಯಲ್ಲಿ ನಿರ್ದಿಷ್ಟ ಕಂಟೆಂಟ್ ನ್ನು ನಿರ್ಬಂಧಿಸುವುದಕ್ಕಾಗಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ನಿರಂಕುಶ ಆದೇಶ ಎಂದು ಹೇಳಿರುವ ಟ್ವಿಟರ್ ಸಂಸ್ಥೆ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ. 
ಟ್ವಿಟರ್ ಖಾತೆ (ಸಾಂಕೇತಿಕ ಚಿತ್ರ)
ಟ್ವಿಟರ್ ಖಾತೆ (ಸಾಂಕೇತಿಕ ಚಿತ್ರ)

ಬೆಂಗಳೂರು: ತನ್ನ ವೇದಿಕೆಯಲ್ಲಿ ನಿರ್ದಿಷ್ಟ ಕಂಟೆಂಟ್ ನ್ನು ನಿರ್ಬಂಧಿಸುವುದಕ್ಕಾಗಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ನಿರಂಕುಶ ಆದೇಶ ಎಂದು ಹೇಳಿರುವ ಟ್ವಿಟರ್ ಸಂಸ್ಥೆ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ. 

ಐಟಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ನೀಡಲಾಗಿರುವ ಆಧಾರದಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ಸಿಂಧುವಾಗುವುದಿಲ್ಲ ಎಂದು ಟ್ವಿಟರ್ ಹೇಳಿರುವುದಾಗಿ ಮೂಲಗಳು ತಿಳಿಸಿವೆ. 

ನಿರ್ಬಂಧದ ಆದೇಶದಲ್ಲಿ ಸೇರಿಸಲಾಗಿರುವ ಹಲವು ಖಾತೆಗಳು ಹಾಗೂ ಕಂಟೆಂಟ್ ಮಿತಿಮೀರಿದ ಮತ್ತು ಅನಿಯಂತ್ರಿತವಾಗಿದ್ದಾಗಿದ್ದು ಕಂಟೆಂಟ್ ನ ಮೂಲದವರಿಗೆ ನೋಟೀಸ್ ನೀಡುವುದಕ್ಕೆ ವಿಫಲವಾಗುತ್ತದೆ ಹಾಗೂ ಹಲವು ಪ್ರಕರಣದಲ್ಲಿ ಅನಗತ್ಯವಾಗಿದೆ ಎಂದು ಟ್ವಿಟರ್ ತನ್ನ ಅರ್ಜಿಯಲ್ಲಿ ವಾದಿಸಿದೆ. 

ಟ್ವಿಟರ್ ಗೆ ನೀಡಲಾಗಿರುವ ಆದೇಶದಲ್ಲಿ ಸೆಕ್ಷನ್ 69A ಯ ಆಧಾರವನ್ನು ನೀಡಲಾಗಿದೆಯಷ್ಟೇ ಆದರೆ ಈ ಆಧಾರಗಳ ಅಡಿಯಲ್ಲಿ ಕಂಟೆಂಟ್ ಹೇಗೆ ಒಳಪಡುತ್ತದೆ, ಸೆಕ್ಷನ್ 69A ನ್ನು ಹೇಗೆ ಉಲ್ಲಂಘಿಸುತ್ತವೆ ಎಂಬುದನ್ನು ವಿವರಿಸಲು ಸರ್ಕಾರ ವಿಫಲವಾಗಿದೆ ಎಂದು ಟ್ವಿಟರ್ ವಾದಿಸಿದೆ. 

ಕೆಲವು ನಿರ್ದಿಷ್ಟ ಖಾತೆಗಳ ಕಂಟೆಂಟ್ ನ್ನು ತೆಗೆದುಹಾಕುವ ಆದೇಶವನ್ನು ಪಾಲನೆ ಮಾಡದೇ ಇದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಐಟಿ ಸಚಿವಾಲಯ ಜೂನ್ ನಲ್ಲಿ ಟ್ವಿಟರ್ ಗೆ ಎಚ್ಚರಿಕೆ ನೀಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com