ಛತ್ತೀಸ್‌ಗಢ ಪೊಲೀಸರ ವಶದಿಂದ ಬಂಧಿತ ಟಿವಿ ನಿರೂಪಕನನ್ನು ಕರೆದೊಯ್ದ ಯುಪಿ ಪೊಲೀಸರು, ದೂರು ದಾಖಲು

ಟಿವಿ ಸುದ್ದಿ ನಿರೂಪಕ ರೋಹಿತ್ ರಂಜನ್ ವಿರುದ್ಧದ ಬಂಧನ ವಾರಂಟ್ ಜಾರಿ ಮಾಡುವಲ್ಲಿ ಭದ್ರತಾ ಸಿಬ್ಬಂದಿ ಕೆಲಸಕ್ಕೆ ಅಡ್ಡಿಪಡಿಸಿದ್ದಕ್ಕೆ ನೋಯ್ಡಾ ಪೊಲೀಸರ ವಿರುದ್ಧ ಛತ್ತೀಸ್‌ಗಢ ಪೊಲೀಸರು ದೂರು ದಾಖಲಿಸಿದ್ದಾರೆ.
ಟಿವಿ ಸುದ್ದಿ ನಿರೂಪಕ ರೋಹಿತ್ ರಂಜನ್
ಟಿವಿ ಸುದ್ದಿ ನಿರೂಪಕ ರೋಹಿತ್ ರಂಜನ್

ರಾಯಪುರ: ಟಿವಿ ಸುದ್ದಿ ನಿರೂಪಕ ರೋಹಿತ್ ರಂಜನ್ ವಿರುದ್ಧದ ಬಂಧನ ವಾರಂಟ್ ಜಾರಿ ಮಾಡುವಲ್ಲಿ ಭದ್ರತಾ ಸಿಬ್ಬಂದಿ ಕೆಲಸಕ್ಕೆ ಅಡ್ಡಿಪಡಿಸಿದ್ದಕ್ಕೆ ನೋಯ್ಡಾ ಪೊಲೀಸರ ವಿರುದ್ಧ ಛತ್ತೀಸ್‌ಗಢ ಪೊಲೀಸರು ದೂರು ದಾಖಲಿಸಿದ್ದಾರೆ.

ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಹಾಗೂ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ರೀತಿಯಲ್ಲಿ  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ ಎಂದು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕಾಂಗ್ರೆಸ್ ಶಾಸಕ ದೇವೇಂದ್ರ ಯಾದವ್ ನೀಡಿದ ದೂರಿನ ಆಧಾರದ ಮೇಲೆ ರಂಜನ್ ಮೇಲೆ ವಿರುದ್ಧ ಕೇಸ್ ದಾಖಲಿಸಲಾಗಿತ್ತು ಎಂಂದು ರಾಯಪುರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಅಗರ್ ವಾಲ್ ಹೇಳಿದ್ದಾರೆ.

ರಾಯ್‌ಪುರದ ಪೊಲೀಸರ ತಂಡ ಮಂಗಳವಾರ ಬೆಳಿಗ್ಗೆ ರಂಜನ್‌ನನ್ನು ಅವರ ನಿವಾಸದಿಂದ ಬಂಧಿಸಲು ಗಾಜಿಯಾಬಾದ್‌ಗೆ ತಲುಪಿತು. ಆದರೆ, ಮಧ್ಯಪ್ರವೇಶಿಸಿರುವ ನೋಯ್ಡಾ ಪೊಲೀಸರು ಆತನನ್ನು ಛತ್ತೀಸ್‌ಗಢ ಪೊಲೀಸರ ವಶದಿಂದ ಕರೆದೊಯ್ದರು. 

ನಮ್ಮ ತಂಡ ಗಾಜಿಯಾಬಾದ್‌ನ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಆದರೆ ಅವರು ಅದನ್ನು ಸ್ವೀಕರಿಸಲಿಲ್ಲ. ಆದ್ದರಿಂದ ನಾವು ಗಾಜಿಯಾಬಾದ್‌ನ ಜಿಲ್ಲಾ ಎಸ್‌ಪಿ ಮತ್ತು ಐಜಿಗೆ ಆಕ್ಷೇಪಣೆಯನ್ನು ಉಲ್ಲೇಖಿಸಿ ನಮ್ಮ ದೂರನ್ನು ಮೇಲ್ ಮಾಡಿದ್ದೇವೆ. ನೋಯ್ಡಾ ಉಪ ಪೊಲೀಸ್ ಆಯುಕ್ತರಿಗೂ ದೂರು ನೀಡುತ್ತೇವೆ. ಸುದ್ದಿ ನಿರೂಪಕ ಎಲ್ಲಿದ್ದಾರೆ ಎಂಬ ಬಗ್ಗೆ ನಮಗೆ ತಿಳಿದಿಲ್ಲ ಎಂದು ರಾಯ್‌ಪುರ ಎಸ್‌ಎಸ್‌ಪಿ ಪ್ರಶಾಂತ್ ಅಗರ್ವಾಲ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ರಾಯ್‌ಪುರದ ಪೊಲೀಸ್ ತಂಡ ಗಾಜಿಯಾಬಾದ್ ನಲ್ಲಿ ಬೀಡುಬಿಡುವ ಸಾಧ್ಯತೆಯಿದೆ.

ನಾವು ಕಾನೂನು ಬದ್ಧವಾಗಿ ಮಾಡಿದ್ದೇವೆ. ರಂಜನ್ ಅವರನ್ನು ವಶಕ್ಕೆ ಪಡೆಯುವಾಗಲೂ ಆತನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿತ್ತು ಎಂದು  ಛತ್ತೀಸ್‌ಗಢ ಪೊಲೀಸರು ಸಮರ್ಥಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com