ಜೆಪಿ ನಡ್ಡಾ ಭೇಟಿ ಮಾಡಿದ ಆನಂದ್ ಶರ್ಮಾ: ಹಲವು ಊಹಾಪೋಹ
ಕಾಂಗ್ರೆಸ್‌ನ ಜಿ 23 ಗುಂಪಿನ ಸದಸ್ಯರಾಗಿರುವ ಆನಂದ್ ಶರ್ಮಾ ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನುವ ಸುದ್ದಿ ಊಹಾಪೋಹಗಳಿಗೆ ಕಾರಣವಾಗಿದೆ.
Published: 07th July 2022 11:53 PM | Last Updated: 08th July 2022 01:09 PM | A+A A-

ಆನಂದ್ ಶರ್ಮಾ, ಜೆ.ಪಿ. ನಡ್ಡಾ
ನವದೆಹಲಿ: ಕಾಂಗ್ರೆಸ್‌ನ ಜಿ 23 ಗುಂಪಿನ ಸದಸ್ಯರಾಗಿರುವ ಆನಂದ್ ಶರ್ಮಾ ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನುವ ಸುದ್ದಿ ಊಹಾಪೋಹಗಳಿಗೆ ಕಾರಣವಾಗಿದೆ.
ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಲು ನನಗೆ ಎಲ್ಲ ಹಕ್ಕಿದೆ. ಇಬ್ಬರು ಒಂದೇ ವಿಚಾರವನ್ನು ಹಂಚಿಕೊಂಡಿರುವುದಾಗಿ ಆನಂದ್ ಶರ್ಮಾ ತಿಳಿಸಿದ್ದಾರೆ.
'ಒಂದು ವೇಳೆ ಅವರನ್ನು ಭೇಟಿಯಾಗಬೇಕಾದರೆ ಬಹಿರಂಗವಾಗಿಯೇ ಹೋಗುತ್ತೇನೆ. ಅದೇನು ದೊಡ್ಡ ವಿಷಯವೇ? ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ಸೈದ್ಧಾಂತಿಕ ವಿರೋಧಿಗಳು ಎಂದರೆ ನಮ್ಮ ನಡುವೆ ಯಾವುದೇ ವೈಯಕ್ತಿಕ ಒಡಕಿದೆ ಎಂದಲ್ಲ. ನಾವು ಸೈದ್ಧಾಂತಿಕ ವಿರೋಧಿಗಳನ್ನು ಸಾಮಾಜಿಕ ಶತ್ರುಗಳನ್ನಾಗಿ ಮಾಡಿಕೊಳ್ಳುವುದಿಲ್ಲ ಎಂದರು.
ಇದನ್ನೂ ಓದಿ: ಮೂಲ ಕಾಂಗ್ರೆಸ್ಸಿಗರು-ಹೊಸ ನಾಯಕರ ನಡುವಿನ ತಿಕ್ಕಾಟ: ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ 'ಕೈ' ನಲ್ಲಿ ಸಂಕಷ್ಟ!
ಜೆಪಿ ನಡ್ಡಾ ಅವರನ್ನು ಭೇಟಿಯಾಗಬೇಕಾದರೆ, ಅವರನ್ನು ಭೇಟಿ ಮಾಡಲು ನನಗೆ ಎಲ್ಲ ಹಕ್ಕಿದೆ, ನನಗೆ ಅವರು ಬಿಜೆಪಿ ಅಧ್ಯಕ್ಷರಲ್ಲ, ನಾವಿಬ್ಬರೂ ಒಂದೇ ರಾಜ್ಯದಿಂದ ಬಂದಿದ್ದು, ಇದರಲ್ಲಿ ರಾಜಕೀಯ ಮಹತ್ವವನ್ನು ಸೇರಿಸಬಾರದು ಎಂದು ಅವರು ಹೇಳಿದರು.
ಶರ್ಮಾ ಅವರು ಗುರುವಾರ ನಡ್ಡಾ ಅವರನ್ನು ಭೇಟಿಯಾದ ಬಗ್ಗೆ ವರದಿಯಾಗಿದೆ. ಆದರೆ, ಈ ವರದಿಯನ್ನು ಕಾಂಗ್ರೆಸ್ ನಾಯಕರು ಅಲ್ಲಗಳೆದಿದ್ದಾರೆ.