ಸಿಎಂ ಹುದ್ದೆಗೆ ಏಕನಾಥ್ ಶಿಂಧೆ ನೇಮಕ ಪ್ರಶ್ನಿಸಿ ಅರ್ಜಿ: ಜುಲೈ 11 ರಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ

ಮಹಾರಾಷ್ಟ್ರ ಮುಖ್ಯಮಂತ್ರಿ ಹುದ್ದೆಗೆ ಏಕನಾಥ್ ಶಿಂಧೆ ಅವರ ನೇಮಕವನ್ನು ಪ್ರಶ್ನಿಸಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜುಲೈ 11 ರಂದು ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. 
ಉದ್ಧವ್ ಠಾಕ್ರೆ- ಶಿಂಧೆ (ಸಂಗ್ರಹ ಚಿತ್ರ)
ಉದ್ಧವ್ ಠಾಕ್ರೆ- ಶಿಂಧೆ (ಸಂಗ್ರಹ ಚಿತ್ರ)

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಹುದ್ದೆಗೆ ಏಕನಾಥ್ ಶಿಂಧೆ ಅವರ ನೇಮಕವನ್ನು ಪ್ರಶ್ನಿಸಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜುಲೈ 11 ರಂದು ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. 

ರಜೆ ಪೀಠದ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಜೆಕೆ ಮಹೇಶ್ವರಿ ಅವರಿದ್ದ ಪೀಠ ಜುಲೈ 11 ಕ್ಕೆ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದೆ.

ಹಿರಿಯ ಅಡ್ವೊಕೇಟ್ ದೇವದತ್ ಕಾಮತ್ ಶಿವಸೇನೆಯ ನಾಯಕ ಸುಭಾಷ್ ದೇಸಾಯಿ ಅವರ ಪರ ಹಾಜರಾಗಿ, ಈಗಾಗಲೇ ಬಾಕಿ ಇರುವ ಅರ್ಜಿಗಳೊಂದಿಗೆ ಹೊಸ ಅರ್ಜಿ ವಿಚಾರಣೆಯನ್ನೂ ನಡೆಸಬೇಕೆಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದಾರೆ. 

ದೇಸಾಯಿ ಜೂನ್ 30 ರಂದು ಶಿಂಧೆ ಬಣ ಹಾಗೂ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನಿಸಿದ ರಾಜ್ಯಪಾಲರ ನಿರ್ಧಾರವನ್ನು ಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ. ಹೊಸ ಸ್ಪೀಕರ್ ಆಯ್ಕೆ ಸೇರಿದಂತೆ ಜುಲೈ 3-4 ರಂದು ನಡೆದ ವಿಧಾನಸಭಾ ಪ್ರಕ್ರಿಯೆಗಳನ್ನೂ ಸಹ ಠಾಕ್ರೆ ಬಣ ಪ್ರಶ್ನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com