'ಸೇವ್ ಅರೆ' ಪ್ರತಿಭಟನೆ ವೇಳೆ ಬಾಲಕಾರ್ಮಿಕರ ಬಳಕೆ: ಮಾಜಿ ಸಚಿವ ಆದಿತ್ಯ ಠಾಕ್ರೆ ಮೇಲೆ ಕಾನೂನು ಅಸ್ತ್ರ!

ಅರೆ ಅರಣ್ಯ ಪ್ರದೇಶದಲ್ಲಿ ಮೆಟ್ರೋ ರೈಲು ಶೆಡ್‌ಗೆ ಅನುಮತಿ ನೀಡುವ ಹೊಸ ಸರ್ಕಾರದ ಕ್ರಮದ ವಿರುದ್ಧದ ರಸ್ತೆಗಿಳಿದು ಪ್ರತಿಭಟಿಸಿದ್ದ ಮಾಜಿ ಸಚಿವ ಆದಿತ್ಯ ಠಾಕ್ರೆಗೆ ಕಾನೂನು ಕಂಟಕ ಎದುರಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮುಂಬೈ: ಅರೆ ಅರಣ್ಯ ಪ್ರದೇಶದಲ್ಲಿ ಮೆಟ್ರೋ ರೈಲು ಶೆಡ್‌ಗೆ ಅನುಮತಿ ನೀಡುವ ಹೊಸ ಸರ್ಕಾರದ ಕ್ರಮದ ವಿರುದ್ಧದ ರಸ್ತೆಗಿಳಿದು ಪ್ರತಿಭಟಿಸಿದ್ದ ಮಾಜಿ ಸಚಿವ ಆದಿತ್ಯ ಠಾಕ್ರೆಗೆ ಕಾನೂನು ಕಂಟಕ ಎದುರಾಗಿದೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಆದಿತ್ಯಾ ಠಾಕ್ರೆ ಸೇವ್ ಅರೆ ಪ್ರತಿಭಟನೆಗೆ ಬಾಲಕಾರ್ಮಿಕರನ್ನು ಬಳಸಿಕೊಂಡಿದ್ದಾರೆಂದು ಎಂದು ಆರೋಪಿಸಿದೆ ಮತ್ತು ಪ್ರಕರಣ ದಾಖಲಿಸಲು ಮುಂಬೈ ಪೊಲೀಸ್ ಆಯುಕ್ತರಿಗೆ ನೋಟಿಸ್ ನೀಡಿದೆ.

ನಿನ್ನೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅವರು, ಕೆಲವು ಮಕ್ಕಳು ಭಿತ್ತಿಪತ್ರಗಳನ್ನು ಹಿಡಿದಿರುವ ಫೋಟೋಗಳನ್ನು ಟ್ವೀಟ್ ಮಾಡಿದ್ದರು.

ಮಕ್ಕಳ ಹಕ್ಕುಗಳ ಸಮಿತಿಯು ಮೂರು ದಿನಗಳೊಳಗೆ ಎಫ್‌ಐಆರ್ ಮತ್ತು ಮಕ್ಕಳ ಹೇಳಿಕೆಗಳ ಪ್ರತಿಯೊಂದಿಗೆ ಕ್ರಮ ತೆಗೆದುಕೊಂಡ ವರದಿಯನ್ನು ಬಯಸುತ್ತದೆ ಎಂದಿದೆ.

ಆದಿತ್ಯ ಠಾಕ್ರೆ ಅವರು 2019 ರಲ್ಲಿ ತಮ್ಮ ತಂದೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದಾಗ ಅರೆ ಪ್ರದೇಶವನ್ನು ಶೆಡ್‌ಗಾಗಿ ಬಳಸುವ ನಿರ್ಧಾರವನ್ನು ಬದಲಾಯಿಸಿದ್ದರು. ಆದರೆ ಸೇನಾ ಬಂಡಾಯಗಾರ ಏಕನಾಥ್ ಶಿಂಧೆ ನೇತೃತ್ವದ ಈ ಹೊಸ ಸರ್ಕಾರವು ಯೋಜನೆಯನ್ನು ಮುಂದುವರೆಸುವುದಾಗಿ ಘೋಷಿಸಿದೆ. ಇದನ್ನು ವಿರೋಧಿಸಿ ನಿನ್ನೆ ಆದಿತ್ಯ ಠಾಕ್ರೆ ಪ್ರತಿಭಟಿಸಿದ್ದರು.

2019 ರಲ್ಲಿ ಮುಂಬೈ ಮೆಟ್ರೋ ರೈಲು ನಿಗಮವು 1,800 ಎಕರೆ ಅರಣ್ಯ ಪ್ರದೇಶದಲ್ಲಿನ ಅರೆ ಕಾಲೋನಿಯಲ್ಲಿ ಮರಗಳನ್ನು ಕಡಿಯಲು ಮುನ್ಸಿಪಲ್ ಕಾರ್ಪೊರೇಶನ್‌ಗೆ ಅನುಮತಿ ಕೋರಿದಾಗ ಈ ಸಮಸ್ಯೆ ಉದ್ಭವಿಸಿತು. ಅದಿನಿಂದಲೂ ಪರಿಸರ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com