ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ: ಸ್ನೇಹ ಪರೀಕ್ ಟಾಪರ್, ಫಲಿತಾಂಶ ವೀಕ್ಷಣೆಗೆ ಹೀಗೆ ಮಾಡಿ

ಜಂಟಿ ಪ್ರವೇಶ ಮುಖ್ಯ ಪರೀಕ್ಷೆಯ (JEE main exam) 2022 ರs ಸಾಲಿನ  ಸೆಷನ್ 1 ರ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪ್ರಕಟಿಸಿದೆ. NTA JEE ಮುಖ್ಯ ಫಲಿತಾಂಶಕ್ಕೆ ಅರ್ಹತೆ ಪಡೆಯಲು ಕನಿಷ್ಠ ಅಂಕಗಳು ಸಾಮಾನ್ಯ ವರ್ಗಕ್ಕೆ ಶೇಕಡಾ 75 ಮತ್ತು SC/SC/PWD ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ ಶೇಕಡಾ 65 ಆಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಜಂಟಿ ಪ್ರವೇಶ ಮುಖ್ಯ ಪರೀಕ್ಷೆಯ (JEE main exam) 2022 ರs ಸಾಲಿನ  ಸೆಷನ್ 1 ರ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪ್ರಕಟಿಸಿದೆ. NTA JEE ಮುಖ್ಯ ಫಲಿತಾಂಶಕ್ಕೆ ಅರ್ಹತೆ ಪಡೆಯಲು ಕನಿಷ್ಠ ಅಂಕಗಳು ಸಾಮಾನ್ಯ ವರ್ಗಕ್ಕೆ ಶೇಕಡಾ 75 ಮತ್ತು SC/SC/PWD ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ ಶೇಕಡಾ 65 ಆಗಿದೆ. 

ಸೆಷನ್ 1ರ ಅಂತಿಮ ಉತ್ತರವನ್ನು ಜುಲೈ 6ರಂದು ಪ್ರಕಟಿಸಲಾಗಿತ್ತು. 

ಅಗತ್ಯವಿರುವ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳು ಈಗ ಸೆಷನ್ 2 JEE ಮುಖ್ಯ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ. ಸೆಷನ್ 2 ರ ಮುಕ್ತಾಯದ ನಂತರ JEE ಅಡ್ವಾನ್ಸ್‌ಡ್‌ ಅಂತಿಮ ಅಂಕಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಘೋಷಿಸುತ್ತದೆ.

ವರದಿಗಳ ಪ್ರಕಾರ, ಸ್ನೇಹಾ ಪರೀಕ್ ಈ ವರ್ಷ ಜೆಇಇ ಮುಖ್ಯ ಪರೀಕ್ಷೆಯಲ್ಲಿ 300 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. JEE ಮುಖ್ಯ ಪರೀಕ್ಷೆ ಫಲಿತಾಂಶವನ್ನು ಮಧ್ಯರಾತ್ರಿಯ ನಂತರ ಅಧಿಕೃತ ವೆಬ್‌ಸೈಟ್ jeemain.nta.nic.in ನಲ್ಲಿ ಬಿಡುಗಡೆ ಮಾಡಲಾಗಿತ್ತು.

JEE ಮುಖ್ಯ ಫಲಿತಾಂಶ ವೀಕ್ಷಿಸುವ ವಿಧಾನ: ಅಧಿಕೃತ ವೆಬ್‌ಸೈಟ್‌ jeemain.nta.nic.ini ಗೆ ಭೇಟಿ ನೀಡಿ. 

JEE(ಮುಖ್ಯ) ಸೆಷನ್ 1ರ ಪೇಪರ್ 1 ರ ಅಂಕಪಟ್ಟಿ ಡೌನ್‌ಲೋಡ್ ಮಾಡಿ' ಎಂದು ಓದುವ ಲಿಂಕ್ ಅನ್ನು ಕ್ಲಿಕ್ ಮಾಡಿ
ಹೊಸ ಪುಟದಲ್ಲಿ, ಲಾಗ್-ಇನ್ ವಿವರಗಳನ್ನು ನಮೂದಿಸಿ - ಅರ್ಜಿ ಸಂಖ್ಯೆ, ಜನ್ಮ ದಿನಾಂಕ ಮತ್ತು ಸೆಕ್ಯುರಿಟಿ ಕೋಡ್ ಹಾಕಬೇಕು. 
JEE ಮುಖ್ಯ ಫಲಿತಾಂಶ ವೀಕ್ಷಿಸುವ ಅಧಿಕೃತ ವೆಬ್‌ಸೈಟ್‌ಗಳು jeemain.nta.nic.in, ntaresults.nic.in ಮತ್ತು 
www.jeemain.nta.nic.in ಗಳಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com