ರಾಷ್ಟ್ರ ಲಾಂಛನದಲ್ಲಿ ಉಗ್ರಾವತರಾದ ಸಿಂಹಗಳು: ಪ್ರತಿಪಕ್ಷಗಳು, ಸಾಮಾಜಿಕ ಹೋರಾಟಗಾರ ಆಕ್ಷೇಪ

ಆಕರ್ಷಕ ಮತ್ತು ವಿಶ್ವಾಸದ ಮುಖದಿಂದ ಕೂಡಿರುವ ಅಶೋಕನ ಸಿಂಹದ ಬದಲಿಗೆ ಭಯಾನಕ ಹಾಗೂ ಉಗ್ರವತಾರದ ಸಿಂಹದ ಭಂಗಿ ಹೊಂದಿರುವ ಲಾಂಛನವನ್ನು ಬದಲಾಯಿಸುವ ಮೂಲಕ ದೇಶದ ರಾಷ್ಟ್ರ ಲಾಂಛನವನ್ನು ವಿರೂಪಗೊಳಿಸಲಾಗಿದೆ ಎಂದು ಕಾಂಗ್ರೆಸ್‌  ಹಾಗೂ ಸಾಮಾಜಿಕ ಹೋರಾಟಗಾರರು ಆಕ್ಷೇಪಿಸಿದ್ದಾರೆ. 
ರಾಷ್ಟ್ರ ಲಾಂಛನ
ರಾಷ್ಟ್ರ ಲಾಂಛನ
Updated on

ನವದೆಹಲಿ: ಆಕರ್ಷಕ ಮತ್ತು ವಿಶ್ವಾಸದ ಮುಖದಿಂದ ಕೂಡಿರುವ ಅಶೋಕನ ಸಿಂಹದ ಬದಲಿಗೆ ಭಯಾನಕ ಹಾಗೂ ಉಗ್ರವತಾರದ ಸಿಂಹದ ಭಂಗಿ ಹೊಂದಿರುವ ಲಾಂಛನವನ್ನು ಬದಲಾಯಿಸುವ ಮೂಲಕ ದೇಶದ ರಾಷ್ಟ್ರ ಲಾಂಛನವನ್ನು ವಿರೂಪಗೊಳಿಸಲಾಗಿದೆ ಎಂದು ಕಾಂಗ್ರೆಸ್‌ ಹಾಗೂ ಸಾಮಾಜಿಕ ಹೋರಾಟಗಾರರು ಆಕ್ಷೇಪಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ದಯವಿಟ್ಟು ಸಿಂಹದ ಮುಖವನ್ನು ಬದಲಾವಣೆ ಮಾಡಿ. ಇದನ್ನು ಪರಿಶೀಲಿಸಿ, ಇಲ್ಲವಾದರೆ, ಅದನ್ನೇ ದುರಸ್ತಿ ಮಾಡಿ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಟ್ವೀಟ್ ಮಾಡಿದ್ದಾರೆ.

ಹೊಸ ಪಾರ್ಲಿಮೆಂಟ್ ಕಟ್ಟಡದ ಮೇಲಿನ ರಾಷ್ಟ್ರ ಲಾಂಛವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಅವರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅನಾವರಣಗೊಳಿಸಿದರು. ಈ ಕಾರ್ಯಕ್ರಮಕ್ಕೆ ವಿಪಕ್ಷ ನಾಯಕರನ್ನು ಆಹ್ವಾನಿಸದೆ ಪ್ರಧಾನಿ ನರೇಂದ್ರ ಮೋದಿ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ.

ನಮ್ಮ ರಾಷ್ಟ್ರದ ಲಾಂಛನವನ್ನು ಅಪಮಾನಿಸಲಾಗಿದೆ. ಆಕರ್ಷಕ ಹಾಗೂ ವಿಶ್ವಾಸಯುತ ಮೂಲ ಅಶೋಕನ ಸ್ತಂಭವನ್ನು ಎಡಗಡೆ ಇಡಲಾಗಿದ್ದು, ಮೋದಿ ಆವೃತ್ತಿಯ ಸಿಂಹವನ್ನು ಬಲಗಡೆ ಇಡಲಾಗಿದೆ. ನೂತನ ಪಾರ್ಲಿಮೆಂಟ್ ಕಟ್ಟಡದ ಮೇಲೆ ಅನಗತ್ಯವಾಗಿ ಆಕ್ರಮಣಕಾರಿ, ಸಮರ್ಪಕವಲ್ಲದ ರಾಷ್ಟ್ರದ ಲಾಂಛನವನ್ನಿಟ್ಟಿರುವುದು ನಾಚಿಕೆಯನ್ನುಂಟು ಮಾಡುತ್ತಿದೆ. ಕೂಡಲೇ ಇದನ್ನು ಬದಲಾಯಿಸಬೇಕು ಎಂದು ಟಿಎಂಸಿ ರಾಜ್ಯಸಭಾ ಸದಸ್ಯ ಜವಹರ್ ಸಿರ್ಕಾರ್ ಟ್ವೀಟರ್ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದು ಮೋದಿ ನವಭಾರತ ಎಂದು ಹಿರಿಯ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com