ರಾಷ್ಟ್ರಪತಿ ಚುನಾವಣೆ: ಯಶವಂತ್ ಸಿನ್ಹಾಗೆ ಮತ್ತೊಂದು ಹಿನ್ನಡೆ; ಮುರ್ಮು ಬೆಂಬಲಿಸಿದ ಅಖಿಲೇಶ್ ಯಾದವ್ ಮಿತ್ರ ಓಂ ಪ್ರಕಾಶ್ ರಾಜ್ಭರ್

ರಾಷ್ಟ್ರಪತಿ ಚುನಾವಣೆಯ ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಅವರ ಪ್ರಚಾರಕ್ಕೆ ಶುಕ್ರವಾರ ಮತ್ತೊಂದು ಹಿನ್ನಡೆಯಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಮಿತ್ರ ಓಂ ಪ್ರಕಾಶ್ ರಾಜ್ ಭರ್ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.
ದ್ರೌಪದಿ ಮುರ್ಮು ಮತ್ತು ರಾಜ್ ಭರ್
ದ್ರೌಪದಿ ಮುರ್ಮು ಮತ್ತು ರಾಜ್ ಭರ್

ಲಖನೌ: ರಾಷ್ಟ್ರಪತಿ ಚುನಾವಣೆಯ ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಅವರ ಪ್ರಚಾರಕ್ಕೆ ಶುಕ್ರವಾರ ಮತ್ತೊಂದು ಹಿನ್ನಡೆಯಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಮಿತ್ರ ಓಂ ಪ್ರಕಾಶ್ ರಾಜ್ ಭರ್ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಆರು ಶಾಸಕರನ್ನು ಹೊಂದಿರುವ ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದ (ಎಸ್ ಬಿಎಸ್ ಪಿ) ಮುಖ್ಯಸ್ಥ ರಾಜ್ ಭರ್, ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳ ಜೊತೆಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

2019ರಲ್ಲಿ ಪಕ್ಷ ಬದಲಾಯಿಸಿದ ಮಾಜಿ ಬಿಜೆಪಿ ಮಿತ್ರ ರಾಜ್ ಭರ್ ಈ ವಾರದ ಆರಂಭದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೂರೆನ್ ನಂತರ ಮುರ್ಮು ಬೆಂಬಲಿಸಿದ ನಾಯಕರಾಗಿದ್ದಾರೆ.

ಉದ್ಧವ್ ಠಾಕ್ರೆ ಆರಂಭದಲ್ಲಿ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸಿದ್ದರು. ಆದರೆ, ಮಂಗಳವಾರ ಮುರ್ಮು ಪರ ನಿಂತರು. ಎರಡು ದಿನಗಳ ನಂತರ ತನ್ನ ಪಾಲುದಾರ ಕಾಂಗ್ರೆಸ್ ವಿರುದ್ಧವಾಗಿ ಜಾರ್ಖಂಡ್ ಮುಕ್ತಿ ಮೋರ್ಚಾ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವ ಎನ್ ಡಿಎಯೇತರ ಪಕ್ಷಗಳ ಪಟ್ಟಿಗೆ ಸೇರಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com