ರಾಷ್ಟ್ರಪತಿ ಚುನಾವಣೆಗೂ ಮುನ್ನ ಯಶವಂತ್ ಸಿನ್ಹಾ ಕೊನೆಯ ಮನವಿ ಏನು?
ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರು ನಾಳಿನ ಚುನಾವಣೆಯಲ್ಲಿ ತಮಗೆ ಮತ ನೀಡುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಭಾನುವಾರ ಅಂತಿಮ ಮನವಿ ಮಾಡಿದರ. ಅವರು ಎನ್‌ಡಿಎಯ ದ್ರೌಪದಿ ಮುರ್ಮು ವಿರುದ್ಧ ಸ್ಪರ್ಧಿಸಿದ್ದಾರೆ.
Published: 17th July 2022 10:03 PM | Last Updated: 18th July 2022 01:31 PM | A+A A-

ಯಶ್ವಂತ್ ಸಿನ್ಹಾ
ನವದೆಹಲಿ: ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರು ನಾಳಿನ ಚುನಾವಣೆಯಲ್ಲಿ ತಮಗೆ ಮತ ನೀಡುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಭಾನುವಾರ ಅಂತಿಮ ಮನವಿ ಮಾಡಿದರ. ಅವರು ಎನ್‌ಡಿಎಯ ದ್ರೌಪದಿ ಮುರ್ಮು ವಿರುದ್ಧ ಸ್ಪರ್ಧಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಯು ಇಬ್ಬರು ಅಭ್ಯರ್ಥಿಗಳ ಬಗ್ಗೆ ಅಲ್ಲ, ಆದರೆ ಇದು ಎರಡು ಸಿದ್ಧಾಂತಗಳ ನಡುವಿನ ಸ್ಪರ್ಧೆಯಾಗಿದೆ ಎಂದು ಯಶವಂತ್ ಸಿನ್ಹಾ ತಮ್ಮ ಹೇಳಿಕೆಯಲ್ಲಿ ಪುನರುಚ್ಚರಿಸಿದ್ದಾರೆ. ತಾವು ಭಾರತದ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಿಂತಿರುವುದಾಗಿ, ದ್ರೌಪದಿ ಮುರ್ಮು ಅವರನ್ನು ಪ್ರಜಾಪ್ರಭುತ್ವದ ಮೇಲೆ ದಿನನಿತ್ಯದ ದಾಳಿಯನ್ನು ಹೆಚ್ಚಿಸುವಂತವರು ಬೆಂಬಲಿಸುತ್ತಿದ್ದಾರೆ ಎಂದಿದ್ದಾರೆ.
“ನಮ್ಮ ಸಂವಿಧಾನದ ಪೂರ್ವ ಸ್ತಂಭವಾದ ಜಾತ್ಯತೀತತೆಯನ್ನು ರಕ್ಷಿಸಲು ನಾನು ನಿಂತಿದ್ದೇನೆ. ನನ್ನ ಪ್ರತಿಸ್ಪರ್ಧಿ ಅಭ್ಯರ್ಥಿಯು ಈ ಸ್ತಂಭವನ್ನು ನಾಶಪಡಿಸುವ ಮತ್ತು ಬಹುಮತದ ಪ್ರಾಬಲ್ಯವನ್ನು ಸ್ಥಾಪಿಸುವ ತನ್ನ ಸಂಕಲ್ಪವನ್ನು ರಹಸ್ಯವಾಗಿರಿಸದ ಪಕ್ಷಕ್ಕೆ ಸೇರಿದವರು” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಅತ್ಯಾಧುನಿಕ EVM ಗಳಿದ್ದರೂ, ರಾಷ್ಟ್ರಪತಿ ಚುನಾವಣೆಗೆ ಬ್ಯಾಲೆಟ್ ಬಾಕ್ಸ್ ಮತದಾನ ಏಕೆ ಗೊತ್ತಾ?
ನಾನು ಒಮ್ಮತ ಮತ್ತು ಸಹಕಾರದ ರಾಜಕೀಯವನ್ನು ಪ್ರೋತ್ಸಾಹಿಸುತ್ತೇನೆ. ನನ್ನ ಪ್ರತಿಸ್ಪರ್ಧಿ ಅಭ್ಯರ್ಥಿಯು ಸಂಘರ್ಷ ಮತ್ತು ಘರ್ಷಣೆಯ ರಾಜಕೀಯವನ್ನು ಅಭ್ಯಾಸ ಮಾಡುವ ಪಕ್ಷದಿಂದ ಬೆಂಬಲಿಸಲ್ಪಟ್ಟಿದ್ದಾರೆ ಎಂದಿದ್ದಾರೆ. ಒಂದು ರಾಷ್ಟ್ರ, ಒಂದು ಪಕ್ಷ, ಒಬ್ಬ ಸರ್ವೋಚ್ಚ ನಾಯಕ. ಇದನ್ನು ನಿಲ್ಲಿಸಬೇಕಲ್ಲವೇ? ನೀವು ಮಾತ್ರ ಇದನ್ನು ತಡೆಯಬಹುದು ಎಂದು ಸಿನ್ಹಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶನಿವಾರ, ಅವರು ಟ್ವಿಟರ್‌ನಲ್ಲಿ ವೀಡಿಯೊವೊಂದನ್ನು ಸಹ ಹಂಚಿಕೊಂಡು ಎಲ್ಲಾ ಶಾಸಕರು ಮತ್ತು ಸಂಸದರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸುವಂತೆ ಒತ್ತಾಯಿಸಿದರು.
ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಅಧಿಕಾರಶಾಹಿ-ರಾಜಕಾರಣಿಯಾಗಿರುವ ಯಶವಂತ್ ಸಿನ್ಹಾ ಅವರು ವಿದೇಶಾಂಗ ವ್ಯವಹಾರಗಳು ಮತ್ತು ಹಣಕಾಸು ಸಚಿವರಂತಹ ಪ್ರಮುಖ ಖಾತೆಗಳನ್ನು ಹೊಂದಿದ್ದರು. ಸೋಮವಾರ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಗುರುವಾರ ಮತ ಎಣಿಕೆ ನಡೆಯಲಿದೆ.