ನೀಟ್ ಪರೀಕ್ಷೆಗೂ ಮುನ್ನ ಒಳ ಉಡುಪು ತೆಗೆಯಲು ಸೂಚನೆ: ಯಾವುದೇ ದೂರು ದಾಖಲಾಗಿಲ್ಲ- ಎನ್ ಟಿಎ

ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ಗೆ ಹಾಜರಾಗುವ ಮುನ್ನ ಒಳ ಉಡುಪು ಕಳಚುವಂತೆ ಸೂಚಿಸಲಾಗಿದೆ ಎಂದು ಕೇರಳದ ವಿದ್ಯಾರ್ಥಿಯೊಬ್ಬಳು ದಾಖಲಿಸಿರುವ ದೂರು ಕಪೋಲ ಕಲ್ಪಿತ  ಮತ್ತು ದುರುದ್ದೇಶದಿಂದ ಕೂಡಿದೆ  ಎಂದು ಪರೀಕ್ಷಾ ಕೇಂದ್ರದ ಅಧೀಕ್ಷಕರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ಗೆ ಹಾಜರಾಗುವ ಮುನ್ನ ಒಳ ಉಡುಪು ಕಳಚುವಂತೆ ಸೂಚಿಸಲಾಗಿದೆ ಎಂದು ಕೇರಳದ ವಿದ್ಯಾರ್ಥಿಯೊಬ್ಬಳು ದಾಖಲಿಸಿರುವ ದೂರು ಕಪೋಲ ಕಲ್ಪಿತ  ಮತ್ತು ದುರುದ್ದೇಶದಿಂದ ಕೂಡಿದೆ  ಎಂದು ಪರೀಕ್ಷಾ ಕೇಂದ್ರದ ಅಧೀಕ್ಷಕರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ತಿಳಿಸಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಅಧಿಕಾರಿಗಳ ಪ್ರಕಾರ, ಈ ಸಂಬಂಧ ಯಾವುದೇ ದೂರನ್ನು ಸ್ವೀಕರಿಸಿಲ್ಲ.

ಕೇರಳದ ಕೊಲ್ಲಂ ಜಿಲ್ಲೆಯ 17 ವರ್ಷದ ವಿದ್ಯಾರ್ಥಿನಿ ತಂದೆ ಪೊಲೀಸರಿಗೆ ದೂರು ನೀಡಿದ್ದು, ಮಾನವ ಹಕ್ಕುಗಳ ಆಯೋಗದ ಮೆಟ್ಟಿಲೇರಲು ಕೂಡಾ ನಿರ್ಧರಿಸಿದ್ದಾರೆ. ತನ್ನ ಮಗಳು ನೀಟ್ ಬುಲೆಟಿನ್‌ನಲ್ಲಿ ಹೇಳಲಾದ ಡ್ರೆಸ್ ಕೋಡ್ ಅನುಸರಿಸಿದ್ದಾಳೆ. ಅದರಲ್ಲಿ ಒಳ ಉಡುಪಿನ ಬಗ್ಗೆ ಏನನ್ನೂ ಹೇಳುವುದಿಲ್ಲ. ಆದಾಗ್ಯೂ, ಪರೀಕ್ಷೆ ಬರೆಯಲು ಅದನ್ನು ತೆಗೆಯುವಂತೆ ಹೇಳಲಾಗಿದೆ ಎಂದು ಅವರು ಟಿವಿ ಚಾನೆಲ್ ವೊಂದಕ್ಕೆ ಹೇಳಿದ್ದಾರೆ.

ಈ ಸಂಬಂಧ ನಾವು ಯಾವುದೇ ದೂರು ತೆಗೆದುಕೊಂಡಿಲ್ಲ. ಮಾಧ್ಯಮಗಳ ವರದಿ ಆಧಾರದ ಮೇಲೆ, ಕೇಂದ್ರದ ಅಧೀಕ್ಷಕರು ಮತ್ತು ವೀಕ್ಷಕರಿಂದ ಕೂಡಲೇ ವರದಿ ಕೇಳಲಾಗಿದೆ. ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಅವರಿಗೆ ಮಾಹಿತಿ ನೀಡಲಾಗಿದೆ. ದೂರು ಕಪೋಲ ಕಲ್ಪಿತ ಮತ್ತು ದುರುದ್ದೇಶದಿಂದ ಕೂಡಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಅಭ್ಯರ್ಥಿಯ ಪೋಷಕರು ಆರೋಪಿಸಿದಂತೆ ನೀಟ್ ಡ್ರೆಸ್ ಕೋಡ್ ಯಾವುದೇ ಚಟುವಟಿಕೆಯನ್ನು ನಿರ್ಬಂಧಿಸಿಲ್ಲ, ಅಭ್ಯರ್ಥಿಗಳನ್ನು ಪರೀಕ್ಷಿಸುವಾಗ ಲಿಂಗ, ಸಂಸ್ಕೃತಿ ಮತ್ತು ಧರ್ಮದ ಬಗ್ಗೆ ಸೂಕ್ಷ್ಮತೆಯನ್ನು ಗಮನಿಸುವಾಗ ಪರೀಕ್ಷೆಯ ಪವಿತ್ರತೆ ಮತ್ತು ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು ಕೋಡ್ ಒದಗಿಸುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com