ಉದ್ಧವ್ ಗೆ ಹಿನ್ನಡೆ: ಲೋಕಸಭೆ ಶಿವಸೇನೆ ನಾಯಕರಾಗಿ ರಾಹುಲ್ ಶೆವಾಲೆ ಹೆಸರಿಸಿದ ಸ್ಪೀಕರ್ ಓಂ ಬಿರ್ಲಾ

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಬಂಡಾಯ ಸಂಸದ ರಾಹುಲ್ ಶೆವಾಲೆ ಅವರನ್ನು ಸಂಸತ್ತಿನ ಕೆಳಮನೆಯ ಶಿವಸೇನೆ ಪಕ್ಷದ ನಾಯಕ ಎಂದು ಹೆಸರಿಸಿದ್ದಾರೆ.
ರಾಹುಲ್ ಶೆವಾಲೆ
ರಾಹುಲ್ ಶೆವಾಲೆ

ನವದೆಹಲಿ: ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಬಂಡಾಯ ಸಂಸದ ರಾಹುಲ್ ಶೆವಾಲೆ ಅವರನ್ನು ಸಂಸತ್ತಿನ ಕೆಳಮನೆಯ ಶಿವಸೇನೆ ಪಕ್ಷದ ನಾಯಕ ಎಂದು ಹೆಸರಿಸಿದ್ದಾರೆ.

ಲೋಕಸಭೆ ಸೆಕ್ರೆಟರಿಯೇಟ್ ಹೊರಡಿಸಿದ ಸುತ್ತೋಲೆಯ ಮೂಲಕ ತಡರಾತ್ರಿ ಈ ನಿರ್ಧಾರವನ್ನು ತಿಳಿಸಲಾಗಿದೆ.

ಹಾಲಿ ವಿನಾಯಕ ರಾವುತ್ ಅವರ ಮೇಲೆ ಅವಿಶ್ವಾಸ ವ್ಯಕ್ತಪಡಿಸಿ ಶಿವಸೇನೆಯ ಕನಿಷ್ಠ 12 ಲೋಕಸಭಾ ಸದಸ್ಯರು ಸ್ಪೀಕರ್‌ಗೆ ಪತ್ರ ಬರೆದು, ಹಾಲಿ ಸದನದಲ್ಲಿ ಶೆವಾಲೆ ಅವರನ್ನು ತಮ್ಮ ನಾಯಕನನ್ನಾಗಿ ನೇಮಿಸುವಂತೆ ಒತ್ತಾಯಿಸಿದರು. 

ನಿನ್ನೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಶಿವಸೇನೆಯ 19 ಲೋಕಸಭಾ ಸದಸ್ಯರಲ್ಲಿ 12 ಮಂದಿ ತಮ್ಮ ಕಡೆಯಿದ್ದು, ಶೆವಾಲೆ ಅವರನ್ನು ಲೋಕಸಭೆಯಲ್ಲಿ ಪಕ್ಷದ ನಾಯಕ ಎಂದು ಹೆಸರಿಸಿದರು.

ಜೂನ್ 20ರಂದು ದೊಡ್ಡ ಪ್ರಮಾಣದ ಶಾಸಕರೊಂದಿಗೆ ಪಕ್ಷದಿಂದ ಹೊರ ನಡೆದ ಶಿಂಧೆ ಅವರು ಬಂಡಾಯದ ನೇತೃತ್ವದ ಒಂದು ತಿಂಗಳ ನಂತರ ಸಂಸತ್ತಿನಲ್ಲಿ ಶಿವಸೇನೆ ಶ್ರೇಣಿಯಲ್ಲಿ ಬ್ರೇಕ್ ಬಿದ್ದಿತು.

ಶಿವಸೇನೆಯಿಂದ ಶಿಂಧೆ ಪಾಳಯಕ್ಕೆ ಸೇರುವ ಶಾಸಕರ ಸಂಖ್ಯೆ ಕ್ರಮೇಣ ಒಟ್ಟು 55ರಲ್ಲಿ 40ಕ್ಕೆ ಏರಿತ್ತು.

ಬಂಡಾಯದ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ನಂತರ ಜೂನ್ 30ರಂದು ಶಿಂಧೆ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com