ಮಗು ದತ್ತು ಪಡೆಯಲು 28,663 ಭಾರತೀಯ ಅರ್ಜಿದಾರರು ವೆಯ್ಟಿಂಗ್: ಲೋಕಸಭೆಗೆ ಸ್ಮೃತಿ ಇರಾನಿ ಮಾಹಿತಿ

ದೇಶದಲ್ಲಿ ಮಗು ದತ್ತು ಪಡೆಯುವವರ ಸಂಖ್ಯೆಯಲ್ಲಿ ಹೆಚ್ಚುತ್ತಲೇ ಇದೆ. ಮಗು ದತ್ತು ಪಡೆಯಲು 28,663 ಅರ್ಜಿದಾರರು ಕಾಯುತ್ತಿರುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಶುಕ್ರವಾರ ತಿಳಿಸಿದೆ.
ಸ್ಮೃತಿ ಇರಾನಿ
ಸ್ಮೃತಿ ಇರಾನಿ

ನವದೆಹಲಿ: ದೇಶದಲ್ಲಿ ಮಗು ದತ್ತು ಪಡೆಯುವವರ ಸಂಖ್ಯೆಯಲ್ಲಿ ಹೆಚ್ಚುತ್ತಲೇ ಇದೆ. ಮಗು ದತ್ತು ಪಡೆಯಲು 28,663 ಅರ್ಜಿದಾರರು ಕಾಯುತ್ತಿರುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಶುಕ್ರವಾರ ತಿಳಿಸಿದೆ.

ಈ ಕುರಿತು ಲೋಕಸಭೆಯಲ್ಲಿ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ಸಚಿವೆ ಸ್ಮೃತಿ ಇರಾನಿ, ಎನ್ ಆರ್ ಐ ಸೇರಿದಂತೆ 1,030 ವಿದೇಶಿ ಅರ್ಜಿದಾರರು ಮಕ್ಕಳನ್ನು ದತ್ತು ಪಡೆಯಲು ನೋಂದಣಿಯಾಗಿದ್ದಾರೆ ಎಂದು ತಿಳಿಸಿದರು. ಈ ಸಂಖ್ಯೆಯಲ್ಲಿ ಇಳಿಕೆಯಾಗಿದೆಯೇ ಎಂಬ ಪ್ರಶ್ನೆಗೆ ಇಲ್ಲ ಎಂದು ಅವರು ಪ್ರತಿಕ್ರಿಯಿಸಿದರು. 

2021-22 ರಲ್ಲಿ 2,991 ದೇಶದಲ್ಲಿರುವವರು ಹಾಗೂ 414 ಹೊರ ರಾಷ್ಟ್ರದವರು ದತ್ತು ಪಡೆದಿರುವುದು ದಾಖಲಾಗಿದೆ. 28,663 ಭಾರತೀಯ ಅರ್ಜಿದಾರರು ಮಗು ದತ್ತು ಪಡೆಯಲು ಕಾಯುತ್ತಿದ್ದಾರೆ ಎಂದು ಇರಾನಿ ಮಾಹಿತಿಯನ್ನು ಹಂಚಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com