'ಕಾಂಗರೂ ಕೋರ್ಟ್' ನಡೆಸುತ್ತಿರುವ ಮಾಧ್ಯಮಗಳಿಂದ ಪ್ರಜಾಪ್ರಭುತ್ವಕ್ಕೆ ಹಾನಿ: ಸಿಜೆಐ ರಮಣ ಕಟು ಟೀಕೆ

ಅಜೆಂಡಾ ಆಧಾರಿತ ಚರ್ಚೆಗಳು ಮತ್ತು ಮಾಧ್ಯಮಗಳು ನಡೆಸುತ್ತಿರುವ ಕಾಂಗರೂ ಕೋರ್ಟ್ ಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತಿವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಎನ್‌ವಿ ರಮಣ ಅವರು ಶನಿವಾರ...
ಸಿಜೆಐ ರಮಣ ಅವರನ್ನು ಸ್ವಾಗತಿಸಿದ ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರವಿ ರಂಜನ್
ಸಿಜೆಐ ರಮಣ ಅವರನ್ನು ಸ್ವಾಗತಿಸಿದ ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರವಿ ರಂಜನ್

ರಾಂಚಿ: ಅಜೆಂಡಾ ಆಧಾರಿತ ಚರ್ಚೆಗಳು ಮತ್ತು ಮಾಧ್ಯಮಗಳು ನಡೆಸುತ್ತಿರುವ ಕಾಂಗರೂ ಕೋರ್ಟ್ ಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತಿವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಎನ್‌ವಿ ರಮಣ ಅವರು ಶನಿವಾರ ಮಾಧ್ಯಮಗಳನ್ನು ಕಟುವಾಗಿ ಟೀಕಿಸಿದ್ದಾರೆ.

ನ್ಯಾಯಮೂರ್ತಿ ಸತ್ಯ ಬ್ರತಾ ಸಿನ್ಹಾ ಅವರ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಜೆಐ ರಮಣ ಅವರು, ಮಾಧ್ಯಮಗಳ ಪ್ರಯೋಗಗಳು ನ್ಯಾಯಾಂಗದ ನ್ಯಾಯಯುತ ಕಾರ್ಯನಿರ್ವಹಣೆ ಮತ್ತು ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿದರು.

ಮಾಧ್ಯಮಗಳು 'ಕಾಂಗರೂ ಕೋರ್ಟ್' ಮಾದರಿಯ ವಿಚಾರಣೆಗಳನ್ನು ನಡೆಸುತ್ತಿವೆ. ಅನುಭವಿಕ ನ್ಯಾಯಮೂರ್ತಿಗಳಿಗೇ ಸವಾಲಾಗುವಂಥ ವಿಷಯಗಳ ಬಗ್ಗೆ ಮಾಧ್ಯಮಗಳು 'ಕಾಂಗರೂ ಕೋರ್ಟ್' ನಡೆಸುತ್ತಿವೆ. ನ್ಯಾಯದಾನಕ್ಕಾಗಿ ಕಾಯುತ್ತಿರುವ ವಿಷಯಗಳ ಮೇಲೆ ತಪ್ಪು ಮಾಹಿತಿಗಳನ್ನೊಳಗೊಂಡ ಮತ್ತು ದುರುದ್ದೇಶಪೂರಿತ ಚರ್ಚೆಗಳನ್ನು ನಡೆಸುವುದು ಆರೋಗ್ಯಕರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗುತ್ತಿವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ತೀವ್ರ ಕಳವಳ ವ್ಯಕ್ತಪಡಿಸಿದರು.

"ಮಾಧ್ಯಮ ಪ್ರಯೋಗಗಳು ಪ್ರಕರಣಗಳನ್ನು ನಿರ್ಧರಿಸುವಲ್ಲಿ ಮಾರ್ಗದರ್ಶಿ ಅಂಶವಾಗುವುದಿಲ್ಲ. ಬದಲಾಗಿ ನ್ಯಾಯ ವಿತರಣೆಯನ್ನು ಒಳಗೊಂಡಿರುವ ವಿಷಯಗಳ ಬಗ್ಗೆ ಮಾಹಿತಿಯಿಲ್ಲದ ಮತ್ತು ಅಜೆಂಡಾ-ಚಾಲಿತ ಚರ್ಚೆಗಳಿಂದ ಪ್ರಜಾಪ್ರಭುತ್ವಕ್ಕೆ ಹಾನಿಕರ’ ಎಂದು ಹೇಳಿದ್ದಾರೆ.

ಮಾಧ್ಯಮಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಹಾಗೂ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ಎರಡು ಹೆಜ್ಜೆ ಹಿಂದೆ ಹೋಗುವಂತೆ ಮಾಡುತ್ತಿವೆ. ಮುದ್ರಣ ಮಾಧ್ಯಮಗಳು ಈಗಲೂ ಒಂದಿಷ್ಟು ಜವಾಬ್ದಾರಿಯಿಂದ ಕೆಲಸ ಮಾಡುತ್ತಿವೆ. ಆದರೆ ಎಲೆಕ್ಟ್ರಾನಿಕ್ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನೇ ಮರೆತಿವೆ ಎಂದು ಮಾಧ್ಯಮಗಳ ಬಗ್ಗೆ ಸಿಜೆಐ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಶಕಗಳ ಕಾಲ ನ್ಯಾಯಾಧೀಶರು ಘೋರ ಅಪರಾಧಿಗಳನ್ನು ಮಾಡಿದ ಅಪರಾಧಿಗಳಿಗೆ ಜೈಲು ಶಿಕ್ಷೆ ನೀಡಿ ಕಂಬಿ ಹಿಂದೆ ಕಳುಹಿಸುತ್ತಾರೆ. ಆದರೆ ಅವರು ನಿವೃತ್ತರಾದ ನಂತರ, ಅಧಿಕಾರಾವಧಿಯಲ್ಲಿ ಇದ್ದ ಎಲ್ಲಾ ಭದ್ರತೆಯನ್ನು ಕಳೆದುಕೊಳ್ಳುತ್ತಾರೆ. ಆದರೆ ನ್ಯಾಯಾಧೀಶರು ತಾವು ಶಿಕ್ಷೆ ನೀಡುವ ವ್ಯಕ್ತಿಗಳು ಇರುವ ಸಮಾಜದಲ್ಲೇ ಬದುಕಬೇಕಾಗಿರುವುದರಿಂದ ಹಾಗೂ ಅವರಿಗೆ ಯಾವುದೇ ಭದ್ರತೆ ನೀಡುವುದಿಲ್ಲವಾದ್ದರಿಂದ ಅವರ ಮೇಲೆ ದೈಹಿಕ ಹಲ್ಲೆಯಂಥಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಮುಖ್ಯ ನ್ಯಾಯಮೂರ್ತಿ ರಮಣ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com