ಬಿಗಿ ಭದ್ರತೆ ನಡುವೆ ಅಗ್ನಿವೀರ್ ವಾಯುಪಡೆ ನೇಮಕಾತಿ ಪರೀಕ್ಷೆ ಪ್ರಾರಂಭ

ಭಾರತೀಯ ವಾಯುಪಡೆಗೆ ಅಗ್ನಿಪಥ್ ಯೋಜನೆಯಡಿ ಮೊದಲ ನೇಮಕಕ್ಕೆ ಇಂದು ಬಿಗಿ ಭದ್ರತೆ ನಡುವೆ ಪರೀಕ್ಷೆ ದೇಶಾದ್ಯಂತ ಪ್ರಾರಂಭವಾಗಿದೆ. 
ಅಗ್ನಿಪಥ್ ಯೋಜನೆ
ಅಗ್ನಿಪಥ್ ಯೋಜನೆ

ನವದೆಹಲಿ: ಭಾರತೀಯ ವಾಯುಪಡೆಗೆ ಅಗ್ನಿಪಥ್ ಯೋಜನೆಯಡಿ ಮೊದಲ ನೇಮಕಕ್ಕೆ ಇಂದು ಬಿಗಿ ಭದ್ರತೆ ನಡುವೆ ಪರೀಕ್ಷೆ ದೇಶಾದ್ಯಂತ ಪ್ರಾರಂಭವಾಗಿದೆ. 

ದೆಹಲಿ, ಕಾನ್ಪುರ, ಪಾಟ್ನ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪರೀಕ್ಷೆ ಪ್ರಾರಾಂಭಗೊಂಡಿದೆ. ಜು.24 ರಿಂದ ಜು31 ವರೆಗೆ ದೇಶಾದ್ಯಂತ ಪರೀಕ್ಷೆಗಳು ನಡೆಯಲಿವೆ.ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಸಿಬ್ಬಂದಿಗಳ ಜೊತೆಗೆ ವಾಯುಪಡೆ ಸಿಬ್ಬಂದಿಗಳನ್ನೂ ನಿಯೋಜನೆ ಮಾಡಲಾಗಿದೆ. ಕೇಂದ್ರಗಳ ಮೇಲೆ ಸಿಸಿಟಿವಿ ಹಾಗೂ ಡ್ರೋನ್ ಗಳ ಮೂಲಕ ನಿಗಾ ವಹಿಸಲಾಗಿದೆ.
 
11 ಕೇಂದ್ರಗಳಲ್ಲಿ ಇಂದು ಅಗ್ನಿವೀರ್ ಪರೀಕ್ಷೆಗಳು ನಡೆಯುತ್ತಿದ್ದು, ಈ ಪೈಕಿ 6 ಕಾನ್ಪುರ ಔಟರ್ ನಲ್ಲಿದ್ದು ಮೂರು ಪಾಳಿಗಳಲ್ಲಿ ಪರೀಕ್ಷೆ ನಡೆಯುತ್ತಿವೆ. ಇಂದು 31,875 ಅಭ್ಯರ್ಥಿಗಳು ಕಾನ್ಪುರದಲ್ಲಿ ಪರೀಕ್ಷೆ ಎದುರಿಸುತ್ತಿದ್ದಾರೆ. ಪ್ರತಿ ಪಾಳಿಯಲ್ಲಿ 625 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com