
ಮಂಕಿಪಾಕ್ಸ್ (ಸಂಗ್ರಹ ಚಿತ್ರ)
ನವದೆಹಲಿ: ದೇಶದಲ್ಲಿ ಮಂಕಿಪಾಕ್ಸ್ ನ 4 ನೇ ಪ್ರಕರಣ ವರದಿಯಾಗಿದ್ದು, ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಭೆ ನಡೆಸಿದೆ. ಭಾನುವಾರದಂದು ಆರೋಗ್ಯ ಸೇವೆಗಳ ಪ್ರಧಾನನಿರ್ದೇಶನಾಲಯದಿಂದ ಈ ಉನ್ನತ ಮಟ್ಟದ ಸಭೆ ನಡೆದಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ರಾಷ್ಟ್ರರಾಜಧಾನಿಗೂ ಮಂಕಿ ಪಾಕ್ಸ್ ಸೋಂಕು ಹರಡಿದ್ದು, ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ದೇ ಇದ್ರೂ ಸೋಂಕು ಪತ್ತೆಯಾಗಿದೆ.
31 ವರ್ಷದ ವ್ಯಕ್ತಿಗೆ ಮೈಮೇಲೆ ಗುಳ್ಲೆಗಳು ಹಾಗೂ ಜ್ವರ ಕಾಣಿಸಿಕೊಂಡಿದ್ದು, ಆರೋಗ್ಯದಲ್ಲಿ ಸ್ಥಿರತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸೋಂಕಿತನನ್ನ ಐಸೊಲೇಷನ್ ಮಾಡಲು ಸೂಚನೆ ನೀಡಲಾಗಿದೆ. ಸೋಂಕು ಹರಡದಂತೆ ಗೈಡ್ಲೈನ್ ಅನುಸರಿಸಲು ಸಲಹೆ ಕೊಡಲಾಗಿದೆ.
ಸೋಂಕಿತ ವ್ಯಕ್ತಿಯ ಸಂಪರ್ಕಿತರನ್ನು ಗುರುತಿಸಿ ಕ್ವಾರಂಟೈನ್ ನಲ್ಲಿರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.ಮಂಕಿಪಾಕ್ಸ್ ರೋಗಲಕ್ಷಣ ಕಾಣಿಸಿದ ಹಿನ್ನೆಲೆಯಲ್ಲಿ ಪಶ್ಚಿಮ ದೆಹಲಿಯ ನಿವಾಸಿಯಾಗಿರುವ ವ್ಯಕ್ತಿಯನ್ನು ಮೂರು ದಿನಗಳ ಹಿಂದೆ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಮಾದರಿಯನ್ನು ಶನಿವಾರ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ) ಗೆ ಕಳುಹಿಸಲಾಗಿತ್ತು ವರದಿಯಲ್ಲಿ ಮಂಕಿ ಫಾಕ್ಸ್ ಪಾಸಿಟಿವ್ ಕಂಡು ಬಂದಿದೆ.