ರಾಷ್ಟ್ರೀಯ ಭದ್ರತೆ, ಯುವಕರ ಭವಿಷ್ಯಕ್ಕೆ ಅಗ್ನಿವೀರ್ ಯೋಜನೆ ಅಪಾಯಕಾರಿ: ರಾಹುಲ್ ಗಾಂಧಿ
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರ ಅಗ್ನಿವೀರ್ ಯೋಜನೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಪ್ರಯೋಗ ರಾಷ್ಟ್ರೀಯ ಭದ್ರತೆ ಮತ್ತು ಯುವಕರ ಭವಿಷ್ಯಕ್ಕೆ ಅಪಾಯಕಾರಿ ಎಂದು ಹೇಳಿದ್ದಾರೆ.
Published: 24th July 2022 01:02 PM | Last Updated: 24th July 2022 01:02 PM | A+A A-

ರಾಹುಲ್ ಗಾಂಧಿ
ನವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರ ಅಗ್ನಿವೀರ್ ಯೋಜನೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಪ್ರಯೋಗ ರಾಷ್ಟ್ರೀಯ ಭದ್ರತೆ ಮತ್ತು ಯುವಕರ ಭವಿಷ್ಯಕ್ಕೆ ಅಪಾಯಕಾರಿ ಎಂದು ಹೇಳಿದ್ದಾರೆ.
ಅಗ್ನಿವೀರ್ ಯೋಜನೆಯು ಯುವಕರ ಭವಿಷ್ಯದೊಂದಿಗೆ ಹೇಗೆ ಆಟವಾಡಲಿದೆ ಎಂಬುದನ್ನು ಅಂದಾಜಿಸಬಹುದಾಗಿದೆ ಎಂದು ಹೇಳಿರುವ ರಾಹುಲ್ ಗಾಂಧಿ, ಪ್ರಸ್ತುತ ಪ್ರತಿ ವರ್ಷ 60 ಸಾವಿರ ಸೈನಿಕರು ನಿವೃತ್ತರಾಗುತ್ತಾರೆ. ಆದರೆ ಮೂರು ಸಾವಿರ ಮಾಜಿ ಸೈನಿಕರಿಗೆ ಮಾತ್ರ ಸರ್ಕಾರಿ ಉದ್ಯೋಗಗಳು ದೊರೆಯುತ್ತಿದೆ.
“ಪ್ರತಿ ವರ್ಷ ಅರವತ್ತು ಸಾವಿರ ಸೈನಿಕರು ನಿವೃತ್ತರಾಗುತ್ತಾರೆ, ಅದರಲ್ಲಿ ಕೇವಲ ಮೂರು ಸಾವಿರ ಜನರು ಮಾತ್ರ ಸರ್ಕಾರಿ ಉದ್ಯೋಗಗಳನ್ನು ಪಡೆಯುತ್ತಿದ್ದಾರೆ. ನಾಲ್ಕು ವರ್ಷಗಳ ಗುತ್ತಿಗೆಯಲ್ಲಿ ನಿವೃತ್ತರಾಗುವ ಸಾವಿರಾರು ಅಗ್ನಿವೀರ್‌ಗಳ ಭವಿಷ್ಯ ಏನಾಗಬಹುದು” ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ. ಪ್ರಧಾನಿಯವರ ಪ್ರಯೋಗಶಾಲೆಯಲ್ಲಿ ಈ ಹೊಸ ಪ್ರಯೋಗದಿಂದ ದೇಶದ ಭದ್ರತೆ ಹಾಗೂ ಯುವಜನರ ಭವಿಷ್ಯ ಎರಡೂ ಅಪಾಯದಲ್ಲಿದೆ” ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
60,000 सैनिक हर साल रिटायर होते हैं, उनमें से सिर्फ 3000 को सरकारी नौकरी मिल रही है।
— Rahul Gandhi (@RahulGandhi) July 24, 2022
4 साल के ठेके पर हज़ारों की संख्या में रिटायर होने वाले अग्निवीरों का भविष्य क्या होगा?
प्रधानमंत्री की प्रयोगशाला के इस नए Experiment से देश की सुरक्षा और युवाओं का भविष्य दोनों खतरे में हैं।