ಬಂಧಿತ ಸಚಿವ ಪಾರ್ಥ ಚಟರ್ಜಿ ನನ್ನ ಮನೆಯನ್ನು ಮಿನಿ ಬ್ಯಾಂಕ್ ಮಾಡಿಕೊಂಡಿದ್ದರು: ಅರ್ಪಿತಾ ಮುಖರ್ಜಿ
ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರೊಂದಿಗೆ ಬಂಧಿತರಾಗಿರುವ ಅವರ ಆಪ್ತೆ ಅರ್ಪಿತಾ ಮುಖರ್ಜಿ ಪ್ರಕರಣದ ಬಗ್ಗೆ ಮಾತನಾಡಿದ್ದು, ಸಚಿವ ಪಾರ್ಥ ಚಟರ್ಜಿಯವರು ತಮ್ಮ ಮನೆಯಲ್ಲಿ ಹಣ ಸಂಗ್ರಹಿಸುತ್ತಿದ್ದರು...
Published: 27th July 2022 04:54 PM | Last Updated: 27th July 2022 04:54 PM | A+A A-

ಅರ್ಪಿತಾ ಮುಖರ್ಜಿ ಮನೆಯಲ್ಲಿ ಪತ್ತೆಯಾದ ಹಣ
ಕೊಲ್ಕತ್ತಾ: ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರೊಂದಿಗೆ ಬಂಧಿತರಾಗಿರುವ ಅವರ ಆಪ್ತೆ ಅರ್ಪಿತಾ ಮುಖರ್ಜಿ ಪ್ರಕರಣದ ಬಗ್ಗೆ ಮಾತನಾಡಿದ್ದು, ಸಚಿವ ಪಾರ್ಥ ಚಟರ್ಜಿಯವರು ತಮ್ಮ ಮನೆಯಲ್ಲಿ ಹಣ ಸಂಗ್ರಹಿಸುತ್ತಿದ್ದರು ಮತ್ತು ನಮ್ಮ ಮನೆಯನ್ನು ಮಿನಿ-ಬ್ಯಾಂಕ್ ನಂತೆ ನಡೆಸಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.
ಮಾಜಿ ನಟಿ, ರೂಪದರ್ಶಿ ಹಾಗೂ ಸಚಿವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಮನೆಯಲ್ಲಿ 21 ಕೋಟಿ ರೂ. ನಗದು ಪತ್ತೆಯಾಗಿತ್ತು. ಶನಿವಾರದಂದು ಅರ್ಪಿತಾ ಮತ್ತು ಪಾರ್ಥ ಚಟರ್ಜಿಯನ್ನು ಬಂಧಿಸುವ ಒಂದು ದಿನದ ಮೊದಲು ಆಕೆಯ ಮನೆಯಲ್ಲಿ ಹಣದ ದೊಡ್ಡ ರಾಶಿಯ ದೃಶ್ಯ ಕಂಡುಬಂದಿತ್ತು.
ಇದನ್ನು ಓದಿ: ಶಿಕ್ಷಕರ ನೇಮಕಾತಿ ಹಗರಣ: ಇಡಿಯಿಂದ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ, ಸಹಚರೆ ಅರ್ಪಿತಾ ಮುಖರ್ಜಿ ಬಂಧನ
ಮೂಲಗಳು ಹೇಳುವಂತೆ ಅರ್ಪಿತಾ ಮುಖರ್ಜಿ ಅವರು ಜಾರಿ ನಿರ್ದೇಶನಾಲಯಕ್ಕೆ “ಎಲ್ಲ ಹಣವನ್ನು ಪಾರ್ಥ ಚಟರ್ಜಿ ಮತ್ತು ಅವರ ಸಹಚರರು ಮಾತ್ರ ಪ್ರವೇಶಿಸುವ ಕೋಣೆಯೊಂದರಲ್ಲಿ ಇಡುತ್ತಿದ್ದರು” ಎಂದು ಹೇಳಿದ್ದಾರೆ.
ಸಚಿವರು ಪ್ರತಿ ವಾರ ಅಥವಾ 10 ದಿನಗಳಿಗೊಮ್ಮೆ ಅರ್ಪಿತಾ ಮನೆಗೆ ಭೇಟಿ ನೀಡುತ್ತಿದ್ದರು ಎಂದು ಮೂಲಗಳು ಹೇಳಿವೆ. “ಪಾರ್ಥ ಚಟರ್ಜಿ ನನ್ನ ಮನೆ ಮತ್ತು ಇನ್ನೊಬ್ಬ ಮಹಿಳೆಯ ಮನೆಯನ್ನು ಮಿನಿ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ. ಆ ಮಹಿಳೆ ಕೂಡ ಅವರ ಆಪ್ತ ಸ್ನೇಹಿತೆ” ಎಂದು ಅರ್ಪಿತಾ ಮುಖರ್ಜಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಕೋಣೆಯಲ್ಲಿ ಎಷ್ಟು ಹಣವಿದೆ ಎಂದು ಸಚಿವರು ಎಂದಿಗೂ ಬಹಿರಂಗಪಡಿಸಲಿಲ್ಲ ಎಂದು ಅವರು ಹೇಳಿದ್ದಾರೆ. ಅರ್ಪಿತಾ ಮುಖರ್ಜಿ ಅವರಿಗೆ ಬಂಗಾಳಿ ನಟರೊಬ್ಬರು ಪಾರ್ಥ ಚಟರ್ಜಿ ಅವರನ್ನು ಪರಿಚಯಿಸಿದರು ಮತ್ತು ಇಬ್ಬರೂ 2016 ರಿಂದ ಹತ್ತಿರವಾಗಿದ್ದರು ಎಂದು ಹೇಳಿದ್ದಾರೆ.
ವರ್ಗಾವಣೆಗಾಗಿ ಮತ್ತು ಕಾಲೇಜುಗಳಿಗೆ ಮಾನ್ಯತೆ ಪಡೆಯಲು ಸಹಾಯಕ್ಕಾಗಿ ಪಡೆದ ಕಿಕ್‌ಬ್ಯಾಕ್‌ಗಳಿಂದ ಹಣ ಬಂದಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಪಾರ್ಥ ಮುಖರ್ಜಿ ಅವರನ್ನು ಆಗಸ್ಟ್ 3 ರವರೆಗೆ ಇಡಿ ಕಸ್ಟಡಿಗೆ ಕಳುಹಿಸಲಾಗಿದೆ.