ರಾಜಸ್ಥಾನ: ಭಾರತ-ಪಾಕ್ ಗಡಿಯಲ್ಲಿ ಬಿಎಸ್‌ಎಫ್ ನಿಂದ 4.7 ಕೆಜಿ ಡ್ರಗ್ಸ್ ಜಪ್ತಿ
ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿ ಬಳಿ 4.7 ಕೆಜಿ ಡ್ರಗ್ಸ್ ಇದ್ದ ಐದು ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಡಿ ಭದ್ರತಾ ಪಡೆ ಮೂಲಗಳು ಬುಧವಾರ ತಿಳಿಸಿವೆ. ಪ್ಯಾಕೆಟ್‌ಗಳು ಪತ್ತೆಯಾದ ಕರಣ್‌ಪುರದ...
Published: 27th July 2022 06:15 PM | Last Updated: 27th July 2022 06:15 PM | A+A A-

ಬಿಎಸ್ ಎಫ್ ಯೋಧರ ಸಾಂದರ್ಭಿಕ ಚಿತ್ರ
ಜೈಪುರ: ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿ ಬಳಿ 4.7 ಕೆಜಿ ಡ್ರಗ್ಸ್ ಇದ್ದ ಐದು ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಡಿ ಭದ್ರತಾ ಪಡೆ ಮೂಲಗಳು ಬುಧವಾರ ತಿಳಿಸಿವೆ. ಪ್ಯಾಕೆಟ್‌ಗಳು ಪತ್ತೆಯಾದ ಕರಣ್‌ಪುರದ ಸ್ಥಳದಿಂದ ಭಾರತ-ಪಾಕ್ ಗಡಿ ಸುಮಾರು 200 ಮೀಟರ್ ದೂರದಲ್ಲಿದೆ.
"ಈ ಮೊದಲು, ಗಡಿಯಾಚೆಯಿಂದ ಡ್ರೋನ್ ಮೂಲಕ ಪ್ಯಾಕೆಟ್‌ಗಳನ್ನು ಕೆಳಗೆ ಬೀಳಿಸಲಾಗಿದೆ ಎಂದು ಶಂಕಿಸಲಾಗಿತ್ತು. ನಂತರ, ಮಂಗಳವಾರ ಮತ್ತು ಬುಧವಾರದ ಮಧ್ಯ ರಾತ್ರಿ ಕರಣ್‌ಪುರದ ಕೆಲವು ಸ್ಥಳೀಯರು ಪ್ಯಾಕೆಟ್‌ಗಳನ್ನು ಈ ಎಸೆದಿದ್ದಾರೆ ಎಂಬುದು ಸ್ಪಷ್ಟವಾಯಿತು" ಎಂದು ಬಿಎಸ್‌ಎಫ್ ಮೂಲಗಳು ತಿಳಿಸಿವೆ.
ಇದನ್ನು ಓದಿ: ಕಾಶ್ಮೀರ: ಶೂಟ್ ಮಾಡಿಕೊಂಡು ಬಿಎಸ್‌ಎಫ್ ಸಬ್ ಇನ್ಸ್ಪೆಕ್ಟರ್ ಆತ್ಮಹತ್ಯೆ
ಬಿಎಸ್‌ಪಿ ಪಡೆಗಳು ಸ್ಥಳಕ್ಕಾಗಮಿಸಿದ ನಂತರ ಕೆಲವು ಅನುಮಾನಾಸ್ಪದ ಚಲನವಲನ ಗಮನಿಸಿ ಗುಂಡಿನ ದಾಳಿ ನಡೆಸಿದರು. ಆದರೆ, ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಶಪಡಿಸಿಕೊಂಡ ಪ್ಯಾಕೆಟ್‌ಗಳಲ್ಲಿ ಒಟ್ಟು 4.7 ಕೆಜಿ ಡ್ರಗ್ಸ್ ಇದೆ ಎಂದು ಅವರು ಹೇಳಿದ್ದಾರೆ.