ದೆಹಲಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಂಕಿಪಾಕ್ಸ್ ಸೋಂಕು ಶಂಕಿತ ವಿದೇಶ ಪ್ರಯಾಣ ಮಾಡಿದ್ದ!

ನವದೆಹಲಿಯ ಎಲ್ಎನ್ ಜೆಪಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಂಕಿಪಾಕ್ಸ್ ಶಂಕಿತ ರೋಗಿ ಒಂದು ತಿಂಗಳ ಹಿಂದೆ ವಿದೇಶಕ್ಕೆ ಪ್ರಯಾಣ ಮಾಡಿದ್ದರು ಎಂದು ತಿಳಿದುಬಂದಿದೆ.
ಮಂಕಿಪಾಕ್ಸ್ (ಸಂಗ್ರಹ ಚಿತ್ರ)
ಮಂಕಿಪಾಕ್ಸ್ (ಸಂಗ್ರಹ ಚಿತ್ರ)

ನವದೆಹಲಿ: ನವದೆಹಲಿಯ ಎಲ್ಎನ್ ಜೆಪಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಂಕಿಪಾಕ್ಸ್ ಶಂಕಿತ ರೋಗಿ ಒಂದು ತಿಂಗಳ ಹಿಂದೆ ವಿದೇಶಕ್ಕೆ ಪ್ರಯಾಣ ಮಾಡಿದ್ದರು ಎಂದು ತಿಳಿದುಬಂದಿದೆ.

ಘಾಜಿಯಾಬಾದ್ ನ ನಿವಾಸಿಯಾಗಿರುವ ವ್ಯಕ್ತಿಯ ಮಾದರಿಗಳ ವರದಿಗಳು ಪುಣೆಯ ರಾಷ್ಟ್ರೀಯ ವೈರಾಲಜಿ ಇನ್ಸ್ಟಿಟ್ಯೂಟ್ ನಿಂದ ಇನ್ನಷ್ಟೇ ಬರಬೇಕಿದ್ದು,  ವ್ಯಕ್ತಿಗೆ ಜ್ವರ ಹಾಗೂ ಗಾಯಗಳು ಉಂಟಾಗಿತ್ತು. ಮಂಗಳವಾರ ಮಧ್ಯಾಹ್ನ ವ್ಯಕ್ತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಐಸೊಲೇಷನ್ ನಲ್ಲಿರಿಸಿದ್ದಾರೆ.

ಕೇರಳದ್ಲಲಿ ಮೂರು ಸೇರಿ ದೇಶದಲ್ಲಿ ಒಟ್ಟಾರೆ 4 ಪ್ರಕರಣಗಳು ಪತ್ತೆಯಾಗಿದೆ. ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣದ ವ್ಯಕ್ತಿ ಎಲ್ ಎನ್ ಜೆಪಿ ಆಸ್ಪತ್ರೆಯ ಐಸೊಲೇಷನ್ ನಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಆತನ ಸ್ಥಿತಿ ಸ್ಥಿರವಾಗಿದ್ದು, ಗಾಯಗಳು ಸಂಪೂರ್ಣವಾಗಿ ವಾಸಿಯಾದ ಬಳಿಕ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com