ಶ್ರೀಲಂಕಾಗೆ ನೆರವು ನೀಡಲು ವಿಶ್ವಬ್ಯಾಂಕ್ ಷರತ್ತುಗಳಿವು...
ನವದೆಹಲಿ: ಶ್ರೀಲಂಕಾಗೆ ಆರ್ಥಿಕ ನೆರವು ನೀಡುವುದಕ್ಕೆ ವಿಶ್ವ ಬ್ಯಾಂಕ್ ಒಂದಷ್ಟು ಷರತ್ತುಗಳನ್ನು ವಿಧಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವಿಶ್ವಬ್ಯಾಂಕ್, ಲಂಕ ಸಮರ್ಪಕ ಸ್ಥೂಲ ಆರ್ಥಿಕ ನೀತಿ ಚೌಕಟ್ಟು ಹೊಂದುವವರೆಗೂ ಆರ್ಥಿಕ ನೆರವು ನೀಡುವುದಕ್ಕೆ ಅಸಾಧ್ಯ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಇದಕ್ಕೂ ಮುನ್ನ ವಿಶ್ವಸಂಸ್ಥೆ ಭಾಗವಾಗಿರುವ ಐಎಂಎಫ್ ಶ್ರೀಲಂಕಾಗೆ ಬೇಲ್ ಔಟ್ ಪ್ಯಾಕೇಜ್ ಗೂ ಮುನ್ನ ತನಗೆ ಸಾಲ ನೀಡಿರುವ ಚೀನಾ ಸೇರಿದಂತೆ ಹಲವರೊಂದಿಗೆ ಋಣಭಾರ ಪುನರ್ರಚನೆಯ ಮಾತುಕತೆಗಳನ್ನು ನಡೆಸುವಂತೆ ಸೂಚಿಸಿತ್ತು.
22 ಮಿಲಿಯನ್ ಜನಸಂಖ್ಯೆ ಹೊಂದಿರುವ ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಲಂಕ ಸಮರ್ಪಕ ಸ್ಥೂಲ ಆರ್ಥಿಕ ನೀತಿ ಚೌಕಟ್ಟು ಹೊಂದುವುದಕ್ಕೆ ಆರ್ಥಿಕ ಸ್ಥಿರತೆಗಾಗಿ ಆಳವಾದ ರಚನಾತ್ಮಕ ಸುಧಾರಣೆಗಳಿಗೆ ಮುಂದಾಗಬೇಕಾಗುತ್ತದೆ ಹಾಗೂ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾದ ಅಂಶಗಳನ್ನು ಸರಿಪಡಿಸುವುದಕ್ಕೆ ಮುಂದಾಗಬೇಕಾಗುತ್ತದೆ.
ಲಂಕಾ ಹಾಗೂ ಅಲ್ಲಿನ ಜನತೆಯ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳಗೊಂಡಿರುವುದಾಗಿ ವಿಶ್ವಬ್ಯಾಂಕ್ ಹೇಳಿದೆ.
ಔಷಧ, ಅಡುಗೆ ಅನಿಲ, ಗೊಬ್ಬರ, ಶಾಲಾ ಮಕ್ಕಳಿಗೆ ಆಹಾರ ಹಾಗೂ ನಗದು ವರ್ಗಾವಣೆಗಳಿಗೆ ನಮ್ಮಲ್ಲಿ ಅಸ್ತಿತ್ವದಲ್ಲಿರುವ ಸಾಲಗಳ ಅಡಿಯಲ್ಲಿ ಸಂಪನ್ಮೂಲಗಳನ್ನು ಮರುಬಳಕೆ ಮಾಡುತ್ತಿದ್ದೇವೆ ಎಂದು ವಿಶ್ವಬ್ಯಾಂಕ್ ಹೇಳಿಕೆ ನೀಡಿದೆ.
ಈ ವರೆಗೂ ತುರ್ತು ಅಗತ್ಯತೆಗಳನ್ನು ನಿಭಾಯಿಸುವುದಕ್ಕಾಗಿ 160 ಮಿಲಿಯನ್ ಡಾಲರ್ ನ್ನು ಬಿಡುಗಡೆ ಮಾಡಿರುವುದಾಗಿ ವಿಶ್ವಬ್ಯಾಂಕ್ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ