ಇಡಿ ರಾವುತ್ ರನ್ನು ಬಂಧಿಸಬಹುದು, ಪಕ್ಷ ಮುಗಿಸಲು 'ಪಿತೂರಿ': ಉದ್ಧವ್ ಠಾಕ್ರೆ

ಈ ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿರುವ ಶಿವಸೇನಾ ನಾಯಕ ಸಂಜಯ್ ರಾವತ್ ಅವರನ್ನು ಬಂಧಿಸಬಹುದು. ಇಡಿಯ ಈ ಕ್ರಮವು ನಮ್ಮ ಪಕ್ಷವನ್ನು ಮುಗಿಸುವ "ಪಿತೂರಿ" ಯ ಭಾಗವಾಗಿದೆ ಎಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು...
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಮುಂಬೈ: ಈ ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿರುವ ಶಿವಸೇನಾ ನಾಯಕ ಸಂಜಯ್ ರಾವತ್ ಅವರನ್ನು ಬಂಧಿಸಬಹುದು. ಇಡಿಯ ಈ ಕ್ರಮವು ನಮ್ಮ ಪಕ್ಷವನ್ನು ಮುಗಿಸುವ "ಪಿತೂರಿ" ಯ ಭಾಗವಾಗಿದೆ ಎಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಭಾನುವಾರ ಆರೋಪಿಸಿದ್ದಾರೆ.

ಇಲ್ಲಿನ ತಮ್ಮ ನಿವಾಸ 'ಮಾತೋಶ್ರೀ'ಯಲ್ಲಿ ಥಾಣೆ ಜಿಲ್ಲೆಯ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾವತ್ ಅವರ ಮನೆಯಲ್ಲಿ ಇಂದು ಶೋಧಿಸಿರುವ ಇಡಿ ಅವರನ್ನು ಬಂಧಿಸಬಹುದು ಎಂದು ಹೇಳಿದ್ದಾರೆ.

ಶಿವಸೇನೆ ಹಿಂದೂಗಳು ಮತ್ತು ಮರಾಠಿಗಳಿಗೆ ಶಕ್ತಿ ನೀಡುವ ಪಕ್ಷವಾಗಿದೆ. ಆದ್ದರಿಂದ ಪಕ್ಷವನ್ನು ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಮಾಜಿ ಸಿಎಂ ಬಿಜೆಪಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ರಾಜಕೀಯವಾಗಿ ಬೆಳೆಯಲು ಶಿವಸೇನೆ ಸಹಾಯ ಪಡೆದ ಜನರು ಈಗ ನಿಷ್ಠೆಯನ್ನು ಬದಲಾಯಿಸುತ್ತಿದ್ದಾರೆ ಎಂದು ಠಾಕ್ರೆ ಬಂಡಾಯ ನಾಯಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com