ಶರದ್ ಪವಾರ್
ಶರದ್ ಪವಾರ್

ಪಕ್ಷೇತರ ಶಾಸಕರನ್ನು ನಮ್ಮಿಂದ ದೂರವಿಟ್ಟು ಫಡ್ನವೀಸ್ ಪವಾಡ ಮಾಡಿದ್ದಾರೆ: ಶರದ್ ಪವಾರ್

ಮಹಾರಾಷ್ಟ್ರ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಆರು ಸ್ಥಾನಗಳ ಪೈಕಿ ಪ್ರತಿಪಕ್ಷ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಕೇಸರಿ ಪಕ್ಷದ ನಾಯಕ...

ಪುಣೆ/ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಆರು ಸ್ಥಾನಗಳ ಪೈಕಿ ಪ್ರತಿಪಕ್ಷ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಕೇಸರಿ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಅವರು ಪಕ್ಷೇತರ ಶಾಸಕರನ್ನು ನಮ್ಮ ಪಾಳೆಯದಿಂದ ದೂರವಿಡುವ ಮೂಲಕ "ಪವಾಡ" ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶನಿವಾರ ಹೇಳಿದ್ದಾರೆ.

ಚುನಾವಣಾಯಲ್ಲಿ ಮಿತ್ರ ಪಕ್ಷ ಶಿವಸೇನೆಯ ಅಭ್ಯರ್ಥಿಯೊಬ್ಬರು ಸೋತಿರುವುದರಿಂದ ನಾನು ಆಘಾತಕ್ಕೆ ಒಳಗಾಗಿಲ್ಲ ಎಂದು ಶರದ್ ಪವಾರ್ ಅವರು ಹೇಳಿದ್ದಾರೆ.

ಇಂದು ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ(ಎಂವಿಎ) ಕೆಲವು ಸಂಖ್ಯೆಗಳ ಕೊರತೆಯ ಹೊರತಾಗಿಯೂ ಆರನೇ ಸ್ಥಾನವನ್ನು ಗೆಲ್ಲಲು ಧೈರ್ಯಶಾಲಿ ಪ್ರಯತ್ನ ಮಾಡಿದೆ ಎಂದು ಹೇಳಿದರು.

"ಫಲಿತಾಂಶ ನೋಡಿ ನನಗೆ ಆಘಾತವಾಗಿಲ್ಲ. ಎಂವಿಎ ಅಭ್ಯರ್ಥಿಗಳು ಶಾಸಕರ ಸಂಖ್ಯೆಗೆ ಅನುಗುಣವಾಗಿ ಮತಗಳನ್ನು ಪಡೆದಿದ್ದಾರೆ. ಆದರೆ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಪಕ್ಷೇತರ ಶಾಸಕರನ್ನು ಮತ್ತು ಸಣ್ಣ ಪಕ್ಷಗಳ ಶಾಸಕರನ್ನು ನಮ್ಮಿಂದ ದೂರವಿಡುವಲ್ಲಿ ಯಶಸ್ವಿಯಾದರು. ಪಕ್ಷೇತರ ಶಾಸಕರು ಮತ್ತು ಸಣ್ಣ ಪಕ್ಷಗಳು ಎಂವಿಎ ಅನ್ನು ಬೆಂಬಲಿಸುವುದಾಗಿ ಭರವಸೆ ನೀಡಿದ್ದರು ಎಂದು ಪವಾರ್ ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com