
ಭದ್ರತಾ ಪಡೆಗಳ ಚಿತ್ರ
ಶ್ರೀನಗರ: ಈ ವರ್ಷದ ಆರಂಭದಿಂದ ಇಲ್ಲಿಯವರೆಗೂ ಕಾಶ್ಮೀರದಲ್ಲಿ 100 ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿರುವುದಾಗಿ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಹತ್ಯೆಗೀಡಾದ 100 ಉಗ್ರರ ಪೈಕಿ ಲಷ್ಕರ್ ಇ ತೊಯ್ಬಾ ಸಂಘಟನೆಯ ಉಗ್ರರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 63 ಎಲ್ ಇಟಿ ಉಗ್ರರು ಹತ್ಯೆಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಜಮ್ಮು: ಗಡಿಯಲ್ಲಿ ಶಸ್ತ್ರಸಜ್ಜಿತ ನಸುಳುಕೋರರು, ಬಿಎಸ್ ಎಫ್ ನಡುವೆ ಗುಂಡಿನ ಕಾಳಗ
ಕಾಶ್ಮೀರದಲ್ಲಿ ಈ ವರ್ಷ ಆರಂಭವಾದಾಗಿನಿಂದಲೂ 29 ವಿದೇಶಿಗರು ಸೇರಿದಂತೆ 100 ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದಾರೆ. ಇದು ಕಳೆದ ವರ್ಷ ಹತ್ಯೆಗೀಡಾದ ಉಗ್ರರಿಗಿಂತ ದುಪ್ಪಟ್ಟಾಗಿದೆ. ಕಳೆದ ವರ್ಷ ಓರ್ವ ವಿದೇಶಿ ಸೇರಿದಂತೆ ಐವತ್ತು ಉಗ್ರರನ್ನು ಹತ್ಯೆ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಹತ್ಯೆಗೀಡಾದ ಉಗ್ರರಲ್ಲಿ 63 ಮಂದಿ ಲಷ್ಕರ್ ಇ ತೊಯ್ಬಾ ಸಂಘಟನೆಗೆ ಸೇರಿದ್ದರೆ, ಉಳಿದವರು ಜೈಶ್ -ಇ-ಮೊಹಮ್ಮದ್ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.