ಅಕ್ರಮ ಹಣ ವರ್ಗಾವಣೆ ಕೇಸ್: 3ನೇ ದಿನ ಬುಧವಾರವೂ ವಿಚಾರಣೆಗೆ ಹಾಜರಾಗುವಂತೆ ರಾಹುಲ್ ಗಾಂಧಿಗೆ ಇಡಿ ಸಮನ್ಸ್!
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು ಸತತ ಎರಡನೇ ದಿನವೂ ಎಂಟು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತು.
Published: 14th June 2022 11:37 PM | Last Updated: 15th June 2022 01:15 PM | A+A A-

ಕಾಂಗ್ರೆಸ್ ನಾಯಕರು
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು ಸತತ ಎರಡನೇ ದಿನವೂ ಎಂಟು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತು. ಇದೀಗ ಮೂರನೇ ದಿನ ಬುಧವಾರವೂ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ರಾಹುಲ್ ಗಾಂಧಿಗೆ ಇಡಿ ಸಮನ್ಸ್ ವಿರೋಧಿ ಇಂದು ಸಹ ಕಾಂಗ್ರೆಸ್ ನಾಯಕರು ದೆಹಲಿ ಮತ್ತು ಬೆಂಗಳೂರಿನಲ್ಲಿ ತನ್ನ ಪ್ರತಿಭಟನೆಯನ್ನು ಮುಂದುವರೆಸಿದ್ದು 'ಸುಳ್ಳು' ಪ್ರಕರಣದ ಮೂಲಕ ಗಾಂಧಿ ಕುಟುಂಬದ ಮಾನಹಾನಿ ಮಾಡಲು ಸಂಚು ನಡೆಸುತ್ತಿದೆ ಎಂದು ಆರೋಪಿಸಿದರು.
ದಿನಕ್ಕೆ 10 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಗಾದ 51 ವರ್ಷದ ಗಾಂಧಿ, ಮಂಗಳವಾರ ಸೆಂಟ್ರಲ್ ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಇಡಿ ಪ್ರಧಾನ ಕಚೇರಿಗೆ ಅವರ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಆಗಮಿಸಿದ್ದು ಬೆಳಿಗ್ಗೆ 11:30ಕ್ಕೆ ವಿಚಾರಣೆ ಪ್ರಾರಂಭವಾಯಿತು.
ಇದನ್ನೂ ಓದಿ: ಪ್ರತಿಭಟನೆ ವೇಳೆ ದೆಹಲಿ ಪೊಲೀಸರಿಂದ ಹಲ್ಲೆ: ಇದು ಪ್ರಜಾಪ್ರಭುತ್ವವೇ; ಕಾಂಗ್ರೆಸ್ ನಾಯಕರ ಪ್ರಶ್ನೆ
ಸುಮಾರು ನಾಲ್ಕು ಗಂಟೆಗಳ ಅಧಿವೇಶನದ ನಂತರ ರಾಹುಲ್ ಗಾಂಧಿಯವರನ್ನು ಮಧ್ಯಾಹ್ನ 3:30ರ ಸುಮಾರಿಗೆ ಸುಮಾರು ಒಂದು ಗಂಟೆ ವಿರಾಮ ತೆಗೆದುಕೊಂಡು ಮನೆಗೆ ತೆರಳಿದರು. ಮತ್ತೆ ವಿಚಾರಣೆಗೆ ಆಗಮಿಸಿದ ರಾಹುಲ್ ಗಾಂಧಿ ರಾತ್ರಿ 9 ಗಂಟೆಗೆ ಇಡಿ ಕಚೇರಿಯಲ್ಲಿದ್ದರು.
ಇಡಿ ಕ್ರಮದ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ನಡೆಸಲು ಯತ್ನಿಸಿದ ನೂರಾರು ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರನ್ನು ಪಕ್ಷದ ಪ್ರಧಾನ ಕಚೇರಿ 24, ಅಕ್ಬರ್ ರಸ್ತೆ ಮತ್ತು ಸೆಂಟ್ರಲ್ ದೆಹಲಿಯ ಸುತ್ತಲೂ ನೆರದಿದ್ದವರನ್ನು ಬಂಧಿಸಲಾಯಿತು.