ದೇಶದಲ್ಲಿ ಶೇ. 89 ರಷ್ಟು ವಯಸ್ಕರಿಗೆ ಸಂಪೂರ್ಣವಾಗಿ ಕೋವಿಡ್ ಲಸಿಕೆ ನೀಡಿಕೆ- ಮನ್ಸೂಖ್ ಮಾಂಡವೀಯಾ

ದೇಶದಲ್ಲಿನ ಶೇ. 89 ರಷ್ಟು ವಯಸ್ಕರಿಗೆ ಸಂಪೂರ್ಣವಾಗಿ ಕೋವಿಡ್-19 ಲಸಿಕೆ ಹಾಕಲಾಗಿದೆ. 12-14 ವರ್ಷದೊಳಗಿನ ಶೇ.75 ರಷ್ಟು ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯಾ ಗುರುವಾರ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿನ ಶೇ. 89 ರಷ್ಟು ವಯಸ್ಕರಿಗೆ ಸಂಪೂರ್ಣವಾಗಿ ಕೋವಿಡ್-19 ಲಸಿಕೆ ಹಾಕಲಾಗಿದೆ. 12-14 ವರ್ಷದೊಳಗಿನ ಶೇ.75 ರಷ್ಟು ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯಾ ಗುರುವಾರ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ಗುರುವಾರದ ತಾತ್ಕಾಲಿಕ ವರದಿ ಪ್ರಕಾರ, ದೇಶದಲ್ಲಿ ನೀಡಲಾದ ಸಂಚಿತ ಲಸಿಕೆ ಪ್ರಮಾಣ 195.67 ಕೋಟಿ ಮೀರಿದೆ. ಸಬ್ ಕಾ ಸಾಥ್ ಮತ್ತು ಸಬ್ ಕಾ ಪ್ರಯಾಸ್ ಮಂತ್ರದೊಂದಿಗೆ ಭಾರತದಲ್ಲಿ ಶೇ. 89 ರಷ್ಟು ವಯಸ್ಕರಿಗೆ ಸಂಪೂರ್ಣವಾಗಿ ಲಸಿಕೆ ಹಾಕಲಾಗಿದೆ. ವಿಶ್ವದ ಬೃಹತ್ ಲಸಿಕಾ ಅಭಿಯಾನ ಹೊಸ ಹೆಗ್ಗುರುತುಗಳೊಂದಿಗೆ ಮುಂದುವರೆಯಲಿದೆ ಎಂದು ಮಾಂಡವೀಯಾ ಟ್ವೀಟ್ ಮಾಡಿದ್ದಾರೆ.

12-14 ವರ್ಷದೊಳಗಿನ ಶೇ.75 ರಷ್ಟು ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದಿದ್ದು, ಆದಷ್ಟು ಬೇಗನೆ ಮುಂದೆ ಕೋವಿಡ್ -19 ಲಸಿಕೆ ಪಡೆದುಕೊಳ್ಳುವಂತೆ ಎಲ್ಲ ಯುವ ಸ್ನೇಹಿತರಿಗೆ ಮನವಿ ಮಾಡುವುದಾಗಿ ಅವರು ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಬೆಳಗ್ಗೆ ಏಳು ಗಂಟೆಯವರೆಗೂ 18ರಿಂದ 59 ವರ್ಷದೊಳಗಿನವರಿಗೆ  ಒಟ್ಟಾರೇ, 3,661,899 ಮುನ್ನೆಚ್ಚರಿಕೆ ಡೋಸ್ ನೀಡಲಾಗಿದೆ. 15- 18 ವರ್ಷದೊಳಗಿನ ಮಕ್ಕಳಿಗೆ 5.99 ಕೋಟಿ ಗೂ ಹೆಚ್ಚು ಮೊದಲು ಡೋಸ್ ಲಸಿಕೆ ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com