ದೇಶದಲ್ಲಿ ಕೊರೋನಾ ಹೆಚ್ಚಳ: ಇಂದು 12,781 ಹೊಸ ಪ್ರಕರಣ ಪತ್ತೆ, 18 ಸಾವು, ಪಾಸಿಟಿವಿಟಿ ದರ ಶೇ. 4ಕ್ಕೆ ಏರಿಕೆ
ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. 130 ದಿನಗಳ ನಂತರ ಕೊರೋನಾ ದೈನಂದಿನ ಪಾಸಿಟಿವಿಟಿ ದರ ಶೇಕಡಾ 4ಕ್ಕೆ ಏರಿಕೆಯಾಗಿದೆ.
Published: 20th June 2022 11:51 AM | Last Updated: 20th June 2022 02:50 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. 130 ದಿನಗಳ ನಂತರ ಕೊರೋನಾ ದೈನಂದಿನ ಪಾಸಿಟಿವಿಟಿ ದರ ಶೇಕಡಾ 4ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಹೊಸದಾಗಿ 12, 781 ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4,33,09,473ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
18 ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟಾರೇ ಮೃತರ ಸಂಖ್ಯೆ 76,700ಕ್ಕೆ ಏರಿಕೆಯಾಗಿದೆ. 8,537 ಸೋಂಕಿತರು ಗುಣಮುಖರಾಗಿದ್ದು, ಸದ್ಯ 76,700 ಸಕ್ರಿಯ ಪ್ರಕರಣಗಳಿವೆ ಎಂದು ಸಚಿವಾಲಯ ಇಂದು ಬೆಳಗ್ಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದೆ.
ದೈನಂದಿನ ಪಾಸಿಟಿವಿಟಿ ದರ ಶೇ. 4.32 ರಷ್ಟಿದ್ದು, ವಾರದ ಪಾಸಿಟಿಟಿವಿ ದರ ಶೇ. 2.62 ರಷ್ಟಿದೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ಪ್ರಮಾಣ ಶೇ. 98.61 ರಷ್ಟಿದೆ.
#COVID19 | India reports 12,781 new cases, 8,537 recoveries and 18 deaths in the last 24 hours.
— ANI (@ANI) June 20, 2022
Active cases 76,700
Daily positivity rate 4.32% pic.twitter.com/f17et5xFcu