ಜಮ್ಮು-ಕಾಶ್ಮೀರದ ಕುಪ್ವಾರ, ಪುಲ್ವಾಮ ಜಿಲ್ಲೆಗಳಲ್ಲಿ ಎನ್ ಕೌಂಟರ್: ಮೂವರು ಉಗ್ರರು ಹತ
ಜಮ್ಮು-ಕಾಶ್ಮೀರದ ಕುಪ್ವಾರ ಮತ್ತು ಪುಲ್ವಾಮ ಜಿಲ್ಲೆಗಳಲ್ಲಿ ಮಧ್ಯರಾತ್ರಿ ನಡೆದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಹತ್ಯೆಗೊಂಡ ಉಗ್ರರಲ್ಲಿ ಒಬ್ಬಾತ ಶೌಕತ್ ಎಂದು ಗುರುತಿಸಲಾಗಿದ್ದು ಮತ್ತಿಬ್ಬರ ಗುರುತು ಪತ್ತೆಯಾಗಿಲ್ಲ.
Published: 20th June 2022 07:29 AM | Last Updated: 20th June 2022 02:41 PM | A+A A-

ಸಾಂದರ್ಭಿಕ ಚಿತ್ರ
ಶ್ರೀನಗರ: ಜಮ್ಮು-ಕಾಶ್ಮೀರದ ಕುಪ್ವಾರ ಮತ್ತು ಪುಲ್ವಾಮ ಜಿಲ್ಲೆಗಳಲ್ಲಿ ಮಧ್ಯರಾತ್ರಿ ನಡೆದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಹತ್ಯೆಗೊಂಡ ಉಗ್ರರಲ್ಲಿ ಒಬ್ಬಾತ ಶೌಕತ್ ಎಂದು ಗುರುತಿಸಲಾಗಿದ್ದು ಮತ್ತಿಬ್ಬರ ಗುರುತು ಪತ್ತೆಯಾಗಿಲ್ಲ.
ಉಗ್ರರ ಇರುವಿಕೆಯ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆ ಶೋಧ ಕಾರ್ಯಾಚರಣೆ ನಡೆಸಿದಾಗ ಏಕಾಏಕಿ ಉಗ್ರರು ದಾಳಿ ಮಾಡಲು ಆರಂಭಿಸಿದರು. ಆಗ ಪುಲ್ವಾಮಾದಲ್ಲಿ ನಡೆದ ಪ್ರತಿದಾಳಿಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ. ಸ್ಥಳದಲ್ಲಿ ಶೋಧಕಾರ್ಯ ಮುಂದುವರಿದಿದೆ. ಕುಪ್ವಾರದಲ್ಲಿ ಎನ್ ಕೌಂಟರ್ ನಡೆದ ಸ್ಥಳದಿಂದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ: 2 ಪ್ರತ್ಯೇಕ ಎನ್ಕೌಂಟರ್ ನಲ್ಲಿ ಪಾಕಿಸ್ತಾನದ ಇಬ್ಬರು ಸೇರಿ 4 ಉಗ್ರರ ಹತ್ಯೆ