ಅಗ್ನಿಪಥ್: ನಾಲ್ಕು ವರ್ಷದ ಅವಧಿ ಕಡಿಮೆಯಾಯಿತು- ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಪಿ ಮಲೀಕ್

ಸೇನೆಗೆ ಸಂಬಂಧಿಸಿದ ಅಗ್ನಿಪಥ್ ಯೋಜನೆಯ ಬಗ್ಗೆ ದೇಶಾದ್ಯಂತ ಪರ-ವಿರೋಧದ ಚರ್ಚೆಗಳು ನಡೆಯುತ್ತಿರುವಾಗಲೇ ಮಾಜಿ ಸೇನಾ ಮುಖ್ಯಸ್ಥರಾಗಿರುವ ಜನರಲ್ ವಿ.ಪಿ ಮಲೀಕ್ ಈ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯ ದೇಶದ ಗಮನ ಸೆಳೆಯುತ್ತಿದೆ. 
ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಪಿ ಮಲೀಕ್
ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಪಿ ಮಲೀಕ್

ನವದೆಹಲಿ: ಸೇನೆಗೆ ಸಂಬಂಧಿಸಿದ ಅಗ್ನಿಪಥ್ ಯೋಜನೆಯ ಬಗ್ಗೆ ದೇಶಾದ್ಯಂತ ಪರ-ವಿರೋಧದ ಚರ್ಚೆಗಳು ನಡೆಯುತ್ತಿರುವಾಗಲೇ ಮಾಜಿ ಸೇನಾ ಮುಖ್ಯಸ್ಥರಾಗಿರುವ ಜನರಲ್ ವಿ.ಪಿ ಮಲೀಕ್ ಈ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯ ದೇಶದ ಗಮನ ಸೆಳೆಯುತ್ತಿದೆ. 

ಕಾರ್ಗಿಲ್ ಯುದ್ಧವನ್ನು ಮುನ್ನಡೆಸಿದ್ದ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ವಿ.ಪಿ ಮಲೀಕ್, ಭೂಸೇನೆಯಲ್ಲಿ ಯುವ ಯೋಧರ ಅಗತ್ಯತೆ ಹಾಗೂ ಸಶಸ್ತ್ರ ಪಡೆಗಳಲ್ಲಿ ಟೆಕ್-ಸಾವಿ (ತಂತ್ರಜ್ಞಾನ-ಬುದ್ಧಿಶಕ್ತಿ)ಯ ಪಡೆಗಳ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ. 

ಈ ಬಗ್ಗೆ ಮಯಾಂಕ್ ಸಿಂಗ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಜನರಲ್ ವಿ.ಪಿ ಮಲೀಕ್, ತಾಂತ್ರಿಕ ಮಾನವಶಕ್ತಿಯನ್ನು ತರಬೇತುಗೊಳಿಸುವುದಕ್ಕೆ 4 ವರ್ಷಗಳು ಸಾಕಾಗುವುದಿಲ್ಲ ಎಂದು ಜನರಲ್ ವಿ.ಪಿ ಮಲೀಕ್ ಅಭಿಪ್ರಾಯಪಟ್ಟಿದ್ದಾರೆ. 

ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಹಿಂಸಾಚಾರ ನಡೆಯುತ್ತಿರುವುದು ದುರದೃಷ್ಟಕರ. ನಾವು ಆಧುನೀಕರಣಕ್ಕಾಗಿ ಹೆಚ್ಚು ನಿಧಿಯನ್ನು ಸಂಗ್ರಹಿಸಲು ದೀರ್ಘಕಾಲದಿಂದ ಸಾಧ್ಯವಾಗಿಲ್ಲ. ಈ ಸುಧಾರಣೆಗಳನ್ನು ಜಾರಿಗೊಳಿಸಿದಾಗ ಕೆಲವು ಒತ್ತಾಯಗಳಿದ್ದಾಗ, ಆ ಪೈಕಿ ಒಂದಾಗಿದ್ದ ಯೋಧರ ವಯಸ್ಸನ್ನು ಇಳಿಕೆ ಮಾಡಲು ಬಯಸಿದ್ದೆವು. ಕಾರ್ಗಿಲ್ ಪರಿಶೀಲನಾ ಸಮಿತಿಯ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದೆವು.

ವ್ಯಕ್ತಿಗೆ ವಯಸ್ಸಾದಂತೆ ದೈಹಿಕ ಪರಿಸ್ಥಿತಿಗಳು ಒಗ್ಗುವುದಿಲ್ಲ. ಎರಡನೇ ಅಂಶವೆಂದರೆ ಅಂತಹ ವ್ಯಕ್ತಿಗಳು ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಜೆಸಿಒ ಹಾಗೂ ಎನ್ ಸಿಒ ಮಟ್ಟದಲ್ಲಿ ನಮಗೆ ಉನ್ನತ ಮಟ್ಟದ ನಾಯಕರ ಅಗತ್ಯವಿದೆ. ಈ ರೀತಿಯ ನಾಯಕರು ಟ್ರೂಪ್ ಗಳನ್ನು ಹಾಗೂ ಯುವ ಅಧಿಕಾರಿಗಳನ್ನು ಮುನ್ನಡೆಸಬೇಕಾಗುತ್ತದೆ. ಈಗಿನ ಯುದ್ಧಕ್ಕೆ ಹೆಚ್ಚು ಟೆಕ್-ಬುದ್ಧಿವಂತ ವ್ಯಕ್ತಿಗಳ ಅಗತ್ಯವಿದೆ.

ಅಗ್ನಿಪಥವನ್ನು ಉತ್ತಮಗೊಳಿಸಲು ನಿಮ್ಮ ಸಲಹೆಗಳೇನು?

ನನ್ನ ಅಭಿಪ್ರಾಯದಲ್ಲಿ 4 ವರ್ಷಗಳ ಅವಧಿ ಅತ್ಯಂತ ಕಡಿಮೆಯಾದದ್ದು, ಅಗ್ನಿಪಥ್ ಗೆ ಸಂಬಂಧಿದಂತೆ ತಲುಪುವಿಕೆ (ಔಟ್ ರೀಚ್) ಸರಿಯಾಗಿಲ್ಲ. ಅದಾಗಲೇ ಪರೀಕ್ಷೆಗಳನ್ನು ತೆಗೆದುಕೊಂಡು ತೇರ್ಗಡೆಯಾಗಿ ನೇಮಕಾತಿಗೆ ಕಾಯುತ್ತಿದ್ದವರಿಗೆ ಈಗ ವಯಸ್ಸು ಹೆಚ್ಚಾಗಿದೆ. ಆರ್ಥಿಕ ಪ್ಯಾಕೇಜ್ ಎಲ್ಲವೂ ಉತ್ತಮವಾಗಿದೆ. ಆದರೆ ಈ ಯೋಜನೆ ಜಾರಿಗೊಳ್ಳುವ ವೇಳೆಗೆ ಲೋಪದೋಷಗಳು ಕಾಣಿಸುತ್ತದೆ. ಸರ್ಕಾರ ಸಂಬಂಧಪಟ್ಟವರೊಂಡಿಗೆ ಹೆಚ್ಚಿನ ಸಂವಹನ ನಡೆಸಬೇಕಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com