ಹರಿಯಾಣ: ಅಪಘಾತದ ನಂತರ ಹೊತ್ತಿ ಉರಿದ ಕಾರು, 3 ಎಂಬಿಬಿಎಸ್ ವಿದ್ಯಾರ್ಥಿಗಳು ಸಜೀವ ದಹನ

ಹರಿಯಾಣದ ಸೋನೆಪತ್‌ನ ರಾಷ್ಟ್ರೀಯ ಹೆದ್ದಾರಿ-334 ಬಿ ನಲ್ಲಿ ವೇಗವಾಗಿ ಬಂದ ಕಾರೊಂದು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದ್ದು, ನಂತರ ಬೆಂಕಿ ಹೊತ್ತಿಕೊಂಡಿದೆ. ಭೀಕರ ಅಪಘಾತದಲ್ಲಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಜೀವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸೋನಿಪತ್: ಹರಿಯಾಣದ ಸೋನೆಪತ್‌ನ ರಾಷ್ಟ್ರೀಯ ಹೆದ್ದಾರಿ-334 ಬಿ ನಲ್ಲಿ ವೇಗವಾಗಿ ಬಂದ ಕಾರೊಂದು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದ್ದು, ನಂತರ ಬೆಂಕಿ ಹೊತ್ತಿಕೊಂಡಿದೆ. ಭೀಕರ ಅಪಘಾತದಲ್ಲಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಜೀವ ದಹನಗೊಂಡಿದ್ದಾರೆ ಮತ್ತು ಇತರ ಮೂವರು ಗಾಯಗೊಂಡಿರುವ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.

ರೋಹ್ಟಕ್ ಪಿಜಿಐನಲ್ಲಿ ಎಬಿಬಿಎಸ್ ಮೂರನೇ ವರ್ಷದ ವಿದ್ಯಾರ್ಥಿಗಳಾದ ಪುಲ್ಕಿತ್, ನರ್ಬೀರ್, ಸಂದೇಶ್, ರೋಹಿತ್, ಅಂಕಿತ್ ಮತ್ತು ಸೋಂಬಿರ್ ರೋಹ್ಟಕ್‌ನಿಂದ ಹರಿದ್ವಾರಕ್ಕೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ರಾಯ್ ಗ್ರಾಮದ ಬಳಿಯ NH-334B ನ ಮೇಲ್ಸೇತುವೆಯಲ್ಲಿ ಅವರ ಕಾರು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿತು. ಬಳಿಕ ಈ ಅವಘಡದಲ್ಲಿ ಪುಲ್ಕಿತ್, ಸಂದೇಶ್ ಮತ್ತು ರೋಹಿತ್ ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬಳಿಕ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಗೊಂಡ ಅಂಕಿತ್, ಸೋಂಬಿರ್ ಮತ್ತು ನರ್ಬೀರ್ ಅವರನ್ನು ಜನರಲ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿಂದ ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರನ್ನು ಪಿಜಿಐ ರೋಹ್ಟಕ್‌ಗೆ ಸ್ಥಳಾಂತರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com