ಮಹಾರಾಷ್ಟ್ರ ಸರ್ಕಾರ ಕಗ್ಗಂಟು: ಸಿಎಂ ಉದ್ಧವ್ ಗೆ ಮತ್ತಷ್ಟು ಸಂಕಷ್ಟ, ಮತ್ತೆ ಮೂವರು ಶಿವಸೇನೆ ಶಾಸಕರು ಶಿಂಧೆ ಬಣಕ್ಕೆ, ಫಡ್ನವೀಸ್ ನೇತೃತ್ವದಲ್ಲಿ ಬಿಜೆಪಿ ತಂತ್ರ!
ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರಿದಿದೆ. ಇತ್ತ ಸರ್ಕಾರ ಉಳಿಸಲು ಸಿಎಂ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಶಿವಸೇನೆ ನಾಯಕರು, ಎನ್ ಸಿಪಿ ಮತ್ತು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದರೆ ಮತ್ತೊಂದೆಡೆ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಮುಂಬೈಯಲ್ಲಿರುವ ಅವರ ನಿವಾಸದಲ್ಲಿ ಬಿಜೆಪಿ ನಾಯಕರ ಸಭೆ, ತಂತ್ರಗಾರಿಕೆ ಮುಂದುವರಿದಿದೆ.
Published: 23rd June 2022 12:03 PM | Last Updated: 23rd June 2022 12:03 PM | A+A A-

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು ಮುಂಬೈನಲ್ಲಿರುವ ತಮ್ಮ ಅಧಿಕೃತ ನಿವಾಸ 'ವರ್ಷ'ದಿಂದ ನಿರ್ಗಮಿಸಿದ ನಂತರ ಅವರ ಖಾಸಗಿ ನಿವಾಸ 'ಮಾತೋಶ್ರೀ' ಹೊರಗೆ ಜಮಾಯಿಸಿದ ಬೆಂಬಲಿಗರನ್ನು ಸ್ವಾಗತಿಸಿದರು
ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರಿದಿದೆ. ಇತ್ತ ಸರ್ಕಾರ ಉಳಿಸಲು ಸಿಎಂ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಶಿವಸೇನೆ ನಾಯಕರು, ಎನ್ ಸಿಪಿ ಮತ್ತು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದರೆ ಮತ್ತೊಂದೆಡೆ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಮುಂಬೈಯಲ್ಲಿರುವ ಅವರ ನಿವಾಸದಲ್ಲಿ ಬಿಜೆಪಿ ನಾಯಕರ ಸಭೆ, ತಂತ್ರಗಾರಿಕೆ ಮುಂದುವರಿದಿದೆ.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸರ್ಕಾರ ರಚಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದು ಏಕನಾಥ್ ಶಿಂಧೆ ಬಂಡಾಯ ಬಣವನ್ನು ತೆಕ್ಕೆಗೆ ಎಳೆದುಕೊಳ್ಳಲು ನೋಡುತ್ತಿದೆ ಎಂದು ತಿಳಿದುಬಂದಿದೆ.
ಇಂದು ಮತ್ತೆ ಮೂವರು ಶಾಸಕರು ಬಂಡಾಯ ಗುಂಪಿಗೆ: ಮಹಾ ವಿಕಾಸ ಅಘಾಡಿ(MVA) ಸರ್ಕಾರದ ಮೂವರು ಶಿವಸೇನೆ ಶಾಸಕರು ಅಸ್ಸಾಂನ ಗುವಾಹಟಿಗೆ ತೆರಳಿ ಸಚಿವ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಗುಂಪನ್ನು ಸೇರಿಕೊಂಡಿದೆ.
ದೀಪಕ್ ಕೇಸಕರ್ (ಸಾವಂತವಾಡಿಯಿಂದ ಶಾಸಕ), ಮಂಗೇಶ್ ಕುಡಾಲ್ಕರ್ (ಚೆಂಬೂರ್) ಮತ್ತು ಸದಾ ಸರ್ವಾಂಕರ್ (ದಾದರ್) ಅವರು ಮುಂಬೈನಿಂದ ಗುವಾಹಟಿಗೆ ಬೆಳಿಗ್ಗೆ ವಿಮಾನದಲ್ಲಿ ತೆರಳಿದರು ಎಂದು ಶಿಂಧೆ ಅವರ ನಿಕಟವರ್ತಿ ಹೇಳಿದ್ದಾರೆ. ನಿನ್ನೆ ಸಂಜೆ ಮಹಾರಾಷ್ಟ್ರ ಸಚಿವ ಗುಲಾಬ್ರಾವ್ ಪಾಟೀಲ್ ಸೇರಿದಂತೆ ನಾಲ್ವರು ಶಾಸಕರು ಗುವಾಹಟಿಗೆ ತೆರಳಿದ್ದರು.
ಇದನ್ನೂ ಓದಿ: ಏಕನಾಥ್ ಶಿಂಧೆಗೆ ಸಿಎಂ ಆಫರ್ ನೀಡಿದ ಉದ್ಧವ್ ಠಾಕ್ರೆ: ಸಾರಾಸಗಟಾಗಿ ತಳ್ಳಿಹಾಕಿದ ಬಂಡಾಯ ನಾಯಕ
ಶಿಂಧೆ ಅವರು ಶಾಸಕರೊಂದಿಗೆ ಸಮಾಲೋಚಿಸಿ ನಂತರ ಮುಂಬೈಗೆ ಯಾವಾಗ ಮರಳಬೇಕು ಎಂದು ನಿರ್ಧರಿಸುತ್ತಾರೆ ಎಂದು ಅವರ ಸಹಚರರು ತಿಳಿಸಿದ್ದಾರೆ. ಇತ್ತ ತಂದೆ ಬಾಳಾಸಾಹೇಬ್ ಠಾಕ್ರೆ ಕಟ್ಟಿದ ಶಿವಸೇನೆಯಲ್ಲಿ ಸಿಎಂ ಉದ್ಧವ್ ಠಾಕ್ರೆ ಬಲ ಕುಗ್ಗುತ್ತದೆಯೇ ಎಂಬ ಸಂದೇಹ ಉಂಟಾಗುತ್ತಿದೆ. ಏಕನಾಥ್ ಶಿಂಧೆ ಬಲ ಮತ್ತಷ್ಟು ಹೆಚ್ಚುತ್ತಿದೆ.