ನಾನು ಮುಖ್ಯಮಂತ್ರಿ ಬಂಗಲೆ ತೊರೆದಿದ್ದೇನೆ, ಆದರೆ ನನ್ನ ಪಟ್ಟನ್ನು ಸಡಿಲಿಸಿಲ್ಲ: ಮಹಾ ಸಿಎಂ ಉದ್ಧವ್ ಠಾಕ್ರೆ

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸರ್ಕಾರ ತಮ್ಮದೇ ಪಕ್ಷದ ನಾಯಕರ ಬಂಡಾಯದಿಂದ ಅಲ್ಪಮತಕ್ಕೆ ಕುಸಿದಿದೆ. ಶಿವಸೇನಾ ಬಂಡಾಯ ನಾಯಕ ಏಕನಾಥ್ ಶಿಂಧೆ ಕೊಟ್ಟ ಶಾಕ್ ನಿಂದ ಕಂಗಾಲಾಗಿರೋ ಉದ್ಧವ್ ಠಾಕ್ರೆ...
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸರ್ಕಾರ ತಮ್ಮದೇ ಪಕ್ಷದ ನಾಯಕರ ಬಂಡಾಯದಿಂದ ಅಲ್ಪಮತಕ್ಕೆ ಕುಸಿದಿದೆ. ಶಿವಸೇನಾ ಬಂಡಾಯ ನಾಯಕ ಏಕನಾಥ್ ಶಿಂಧೆ ಕೊಟ್ಟ ಶಾಕ್ ನಿಂದ ಕಂಗಾಲಾಗಿರೋ ಉದ್ಧವ್ ಠಾಕ್ರೆ ಅವರು, ಶಿವಸೇನಾ ಬಂಡುಕೋರರು ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ನಮ್ಮನ್ನು ಬಿಟ್ಟುಹೋದವರ ಬಗ್ಗೆ ಹೋದವರ ಬಗ್ಗೆ ನಾನೇಕೆ ವ್ಯಥೆ ಪಡಲಿ?" ಎಂದು ಹೇಳಿದ್ದಾರೆ.

ಇಂದು ಪಕ್ಷದ ನಾಯಕರನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್  ಮೂಲಕ ಮಾತನಾಡಿದ ಉದ್ಧವ್ ಠಾಕ್ರೆ, ಶಿವಸೇನೆ ತೊರೆಯುವುದಕ್ಕೂ ಮೊದಲು ಸಾಯುವುದಾಗಿ ಘೋಷಿಸಿದ ಜನರು ಈಗ ಓಡಿಹೋಗಿದ್ದಾರೆ ಎಂದು ಹೇಳಿದರು.

ನಾನು ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನು ಖಾಲಿ ಮಾಡಿರಬಹುದು. ಆದರೆ ನನ್ನ ಪಟ್ಟನ್ನು ಸಡಿಲಿಸಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ಕೋವಿಡ್ 19 ಸಾಂಕ್ರಾಮಿಕ ಮತ್ತು ಸ್ವಂತಹ ನಾನು ಅನಾರೋಗ್ಯದ ವಿರುದ್ಧ ಹೋರಾಡಿದೆ. ಆದರೆ ವಿರೋಧಿಗಳು ಈ ಪರಿಸ್ಥಿತಿಯ ಲಾಭವನ್ನು ಪಡೆದರು ಎಂದು ಮಹಾ ಸಿಎಂ ಹೇಳಿದ್ದಾರೆ.

ಶಿವಸೇನೆ ಮತ್ತು ಠಾಕ್ರೆ ಅವರ ಹೆಸರನ್ನು ಬಳಸದೆ ನೀವು ಹೇಗೆ ಮುಂದುವರಿಯುತ್ತೀರಿ ಎಂದು ಠಾಕ್ರೆ ಅವರು ತಮ್ಮನ್ನು ತೊರೆದ ಬಂಡಾಯ ಶಾಸಕರನ್ನು ಗುರಿಯಾಗಿಸಿಕೊಂಡು ಹೇಳಿದರು.

ಬಂಡಾಯದ ಹೋರಾಟದಲ್ಲಿ 40ಕ್ಕೂ ಹೆಚ್ಚು ಶಾಸಕರು ಬಂಡಾಯಗಾರ ಏಕನಾಥ್ ಶಿಂಧೆ ಅವರನ್ನು ಬೆಂಬಲಿಸಿರುವ ಬೆನ್ನಲ್ಲೇ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ಅವರು ಶಿವಸೇನೆಯ ಜಿಲ್ಲಾ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com