'ಮೋದಿಯವರು 19 ವರ್ಷ ಮೌನವಾಗಿ ವಿಷಕಂಠನಂತೆ ನೋವು ಸಹಿಸಿಕೊಂಡರು, ಈಗ ಸತ್ಯ ಹೊರಬಂದಿದೆ': 2002ರ ಗುಜರಾತ್ ಗಲಭೆ ತೀರ್ಪಿನ ಬಗ್ಗೆ ಅಮಿತ್ ಶಾ

2002ರಲ್ಲಿ ಗುಜರಾತ್ ರಾಜ್ಯದಲ್ಲಿ ನಡೆದ ಗಲಭೆಯಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ಇಂದಿನ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಲವರಿಗೆ ಎಸ್‌ಐಟಿ ನೀಡಿದ್ದ ಕ್ಲೀನ್ ಚಿಟ್ ಅನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ (ಎಸ್‌ಸಿ) ತೀರ್ಪನ್ನು ಅಮಿತ್ ಶಾ ಶ್ಲಾಘಿಸಿದ್ದಾರೆ.
ಅಮಿತ್ ಶಾ-ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಅಮಿತ್ ಶಾ-ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)

ನವದೆಹಲಿ: 2002ರ ಗುಜರಾತ್ ದಂಗೆಯ (2002 Gujarat riot) ಮುೂಲ ಕಾರಣ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ್ದು. 16 ದಿನದ ಮಗು ಸೇರಿದಂತೆ 59 ಮಂದಿ ಸಜೀವ ದಹನವಾಗಿದ್ದರು. ಆಗ ಮೆರವಣಿಗೆ ಮಾಡಿರಲಿಲ್ಲ, ಅದು ಮಾಡಿದ್ದ ತಪ್ಪಾಗಿತ್ತು. ಮೃತದೇಹಗಳನ್ನು ಸಿವಿಲ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ನಂತರ ಮುಚ್ಚಿದ ಆಂಬ್ಯುಲೆನ್ಸ್ ನಲ್ಲಿ ಮೃತದೇಹಗಳನ್ನು ಅವರ ಕುಟುಂಬಸ್ಥರಿಗೆ ಒಪ್ಪಿಸಲಾಯಿತು ಎಂದು ಗೃಹ ಸಚಿವ ಅಮಿತ್ ಶಾ ಅಂದಿನ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು 2002ರ ಗುಜರಾತ್ ಗಲಭೆ ಏಕಾಯಿತು, ಹೇಗಾಯಿತು, ನಂತರದ ಪರಿಣಾಮಗಳ ಬಗ್ಗೆ ಪತ್ರಕರ್ತೆ ಮುಂದೆ ವಿವರವಾಗಿ ಮಾತನಾಡಿದ್ದಾರೆ. 

2002ರಲ್ಲಿ ಗುಜರಾತ್ ರಾಜ್ಯದಲ್ಲಿ ನಡೆದ ಗಲಭೆಯಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ಇಂದಿನ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಲವರಿಗೆ ಎಸ್‌ಐಟಿ ನೀಡಿದ್ದ ಕ್ಲೀನ್ ಚಿಟ್ ಅನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ (ಎಸ್‌ಸಿ) ತೀರ್ಪನ್ನು ಅಮಿತ್ ಶಾ ಶ್ಲಾಘಿಸಿದ್ದಾರೆ.

ಪ್ರಧಾನಿ ಮೋದಿ ಅವರು ಕಳೆದ 19 ವರ್ಷಗಳಿಂದ ಒಂದು ಮಾತನ್ನೂ ಮಾತನಾಡದೆ ನೋವನ್ನು ಸಹಿಸಿಕೊಂಡಿದ್ದಾರೆ ವಿಷ ನುಂಗಿ ತನ್ನ ಗಂಟಲಿನಲ್ಲಿ ಹಿಡಿದಿಟ್ಟುಕೊಂಡಿರುವ ಶಿವನಂತೆ ಮೋದಿಯವರು ಎಂದು ಶ್ಲಾಘಿಸಿದ್ದಾರೆ.

ಪ್ರಕರಣದ ಬಗ್ಗೆ ಸತ್ಯ ಹೊರಬಂದಿದ್ದು, ಚಿನ್ನದಂತೆ ಹೊಳೆಯುತ್ತಿದೆ ಎಂದು ಅಮಿತ್ ಶಾ ಹೇಳಿದರು. 2002ರ ಗಲಭೆಯ ನಂತರ ಗುಜರಾತ್ ಮುಖ್ಯಮಂತ್ರಿ ವಿರುದ್ಧ "ರಾಜಕೀಯ ಪ್ರೇರಿತ" ಆರೋಪಗಳನ್ನು ಹೊರಿಸಿದ ಜನರಿಂದ ಶಾ ಕ್ಷಮೆಯಾಚಿಸಿದರು.

"ಸುಪ್ರೀಂ ಕೋರ್ಟ್ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದೆ, ಆರೋಪಗಳನ್ನು ಏಕೆ ಮಾಡಿದೆ ಎಂದು ಹೇಳಿದೆ, ಆರೋಪಗಳನ್ನು ರಾಜಕೀಯ ಪ್ರೇರಿತ ಎಂದು ನೀವು ಹೇಳಬಹುದು, ಇದು ಸಹ ಸಾಬೀತಾಗಿದೆ, ಇದು 19 ವರ್ಷಗಳ ಹೋರಾಟ ಎಂದರು.

ಸತ್ಯದ ಪರವಾಗಿದ್ದರೂ ಆರೋಪಗಳನ್ನು ಎದುರಿಸುತ್ತಿರುವ ಮೋದಿಜಿ ಈ ನೋವನ್ನು ಸಹಿಸಿಕೊಳ್ಳುವುದನ್ನು ನಾನು ಹತ್ತಿರದಿಂದ ನೋಡಿದ್ದೇನೆ. ನ್ಯಾಯಾಂಗ ಪ್ರಕ್ರಿಯೆ ನಡೆಯುತ್ತಿದ್ದರಿಂದ ಅವರು ಮಾತನಾಡಲಿಲ್ಲ. ದೃಢವಾದ ಹೃದಯ ಹೊಂದಿರುವ ವ್ಯಕ್ತಿ ಮಾತ್ರ ಇದನ್ನು ಮಾಡಬಹುದು. ಇಂದು ನಾವು ಮಾಡುತ್ತಿರುವ ಸಂದರ್ಶನವನ್ನು ನಾನು 2003 ರಲ್ಲಿ ಗುಜರಾತ್ ಗೃಹ ಸಚಿವನಾಗಿ ಮತ್ತು ನಂತರ ಪಕ್ಷದ ಮುಖ್ಯಸ್ಥನಾಗಿ ಮಾಡಬಹುದಿತ್ತು. ಆದರೆ ನ್ಯಾಯಾಂಗ ಪ್ರಕ್ರಿಯೆ ಮುಗಿಯುವವರೆಗೂ ಮೋದಿಜಿ ಯಾವುದೇ ಪ್ರಭಾವ ಬೀರದಂತೆ ಏನನ್ನೂ ಹೇಳಲಿಲ್ಲ. ಇದೆಲ್ಲವನ್ನೂ ಅವರು ಮೌನವಾಗಿ ಸಹಿಸಿಕೊಂಡರು ಎಂದರು. 

ಬಿಜೆಪಿಯ ರಾಜಕೀಯ ವಿರೋಧಿಗಳು, ರಾಜಕೀಯ ಪ್ರೇರಿತ ಪತ್ರಕರ್ತರು ಮತ್ತು ಸರ್ಕಾರೇತರ ಸಂಘಟನೆಗಳು(ತ್ರಿಕೂಟ) ಒಟ್ಟಾಗಿ ಬಿಜೆಪಿ ಮತ್ತು ಅದರ ನಾಯಕರ ವಿರುದ್ಧ ಗಲಭೆ ಪ್ರಕರಣದಲ್ಲಿ ಆರೋಪ ಮಾಡಿದರು. ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಿದ್ದರೂ ಕೂಡ ಬಿಜೆಪಿಗೆ ಗುಜರಾತ್ ನ ಜನರ ಮೇಲೆ ನಂಬಿಕೆಯಿತ್ತು, ಅಲ್ಲಿನ ಜನರು ಮಾತ್ರ ಬಿಜೆಪಿಯ ಕೈಬಿಡಲಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. 

ಸುಪ್ರೀಂ ಕೋರ್ಟ್ ನ ತೀರ್ಪನ್ನು ಬಹಳ ಎಚ್ಚರಿಕೆಯಿಂದ ಓದಿದ್ದೇನೆ. ತೀರ್ಪಿನಲ್ಲಿ ತೀಸ್ತಾ ಸೆಟಲ್ವಾಡ್ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆಕೆಯು ನಡೆಸುತ್ತಿದ್ದ ಎನ್‌ಜಿಒ - ನನಗೆ ಎನ್‌ಜಿಒ ಹೆಸರು ನೆನಪಿಲ್ಲ- ಗಲಭೆಯ ಬಗ್ಗೆ ಆಧಾರರಹಿತ ಮಾಹಿತಿಯನ್ನು ಪೊಲೀಸರಿಗೆ ನೀಡಲಾಗಿತ್ತು ಎಂದು ಶಾ ಹೇಳಿದ್ದಾರೆ.

ತ್ರಿಕೂಟದ ನಂಟಿನಿಂದ ಸಾರ್ವಜನಿಕರು ಮಾತ್ರ ವಂಚಿತರಾಗಿಲ್ಲ, ಇಂದಿಗೆ ಈ ಘಟನೆ ನಡೆದು 20 ವರ್ಷಗಳಾಗಿದೆ. ಜನರ ಆದೇಶವೇ ದೊಡ್ಡದು, ಸಾರ್ವಜನಿಕರು ಎಲ್ಲವನ್ನೂ ನೋಡುತ್ತಾರೆ. ದೇಶದ 130 ಕೋಟಿ ಜನರಿಗೆ 260 ಕೋಟಿ ಕಣ್ಣುಗಳು ಮತ್ತು 260 ಕೋಟಿ ಕಿವಿಗಳಿವೆ. ಅವರು ಎಲ್ಲವನ್ನೂ ನೋಡುತ್ತಾರೆ ಮತ್ತು ಕೇಳುತ್ತಾರೆ, ನಾವು ಎಂದಿಗೂ ಚುನಾವಣೆಯಲ್ಲಿ (ಗುಜರಾತ್‌ನಲ್ಲಿ) ಸೋತಿಲ್ಲ. ಸಾರ್ವಜನಿಕರು ಈ ಆರೋಪಗಳನ್ನು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಕೂಡ ಹೇಳಿದ್ದಾರೆ. 

2002ರ ಗುಜರಾತ್ ಗಲಭೆಯಲ್ಲಿ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರ ಹಲವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡಿದ್ದ ಕ್ಲೀನ್ ಚಿಟ್ ಅನ್ನು ಪ್ರಶ್ನಿಸಿ ಕಾಂಗ್ರೆಸ್ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಅವರ ವಿಧವೆ ಪತ್ನಿ ಝಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಫೆಬ್ರವರಿ 28, 2002ರಂದು ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಕೊಲ್ಲಲ್ಪಟ್ಟ 69 ಜನರಲ್ಲಿ ಎಹ್ಸಾನ್ ಜಾಫ್ರಿ ಸೇರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com