ಜಮ್ಮು-ಕಾಶ್ಮೀರ: ಭಯೋತ್ಪಾದಕನ ಬಂಧನ, ಶಸ್ತ್ರಾಸ್ತ್ರಗಳ ವಶ
ಜಮ್ಮು-ಕಾಶ್ಮೀರದ ದೋಡಾ ಪೊಲೀಸರು ಭದ್ರತಾ ಪಡೆಗಳೊಂದಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕೋಟಿ ದೋಡಾ ನಿವಾಸಿ ಫರೀದ್ ಅಹ್ಮದ್ ಎಂಬ ಭಯೋತ್ಪಾದಕನನ್ನು ಸೋಮವಾರ ನಸುಕಿನ ಜಾವ ಬಂಧಿಸಿದ್ದಾರೆ. ಆತನ ಬಳಿಯಿಂದ ಒಂದು ಚೈನೀಸ್ ಪಿಸ್ತೂಲ್, ಎರಡು ಬಂದೂಕುಗಳು, 14 ಕಾಟ್ರೀಜ್ ಗಳು ಮತ್ತು ಒಂದು ಮೊಬೈಲ್ ಫೋನ್ ನ್ನು ವಶಪಡಿಸಿಕೊಂಡಿದ್ದಾರೆ.
Published: 27th June 2022 08:49 AM | Last Updated: 27th June 2022 08:49 AM | A+A A-

ಬಂಧಿತ ಉಗ್ರ
ಶ್ರೀನಗರ: ಜಮ್ಮು-ಕಾಶ್ಮೀರದ ದೋಡಾ ಪೊಲೀಸರು ಭದ್ರತಾ ಪಡೆಗಳೊಂದಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕೋಟಿ ದೋಡಾ ನಿವಾಸಿ ಫರೀದ್ ಅಹ್ಮದ್ ಎಂಬ ಭಯೋತ್ಪಾದಕನನ್ನು ಸೋಮವಾರ ನಸುಕಿನ ಜಾವ ಬಂಧಿಸಿದ್ದಾರೆ. ಆತನ ಬಳಿಯಿಂದ ಒಂದು ಚೈನೀಸ್ ಪಿಸ್ತೂಲ್, ಎರಡು ಬಂದೂಕುಗಳು, 14 ಕಾಟ್ರೀಜ್ ಗಳು ಮತ್ತು ಒಂದು ಮೊಬೈಲ್ ಫೋನ್ ನ್ನು ವಶಪಡಿಸಿಕೊಂಡಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಅಮರನಾಥ ಯಾತ್ರೆಗೆ ಮುನ್ನ ಹೆಚ್ಚಿನ ಭದ್ರತಾ ಕ್ರಮವಾಗಿ, ಪೊಲೀಸರು ಠಾಣೆ ದೋಡಾದ ಪಟ್ಟಣದ ಹೊರವಲಯದಲ್ಲಿ ತಡೆಯನ್ನು ಹಾಕಿದ್ದರು. ಈ ಸಂದರ್ಭದಲ್ಲಿ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಹೊತ್ತಿದ್ದ ಯುವಕನನ್ನು ತಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ವಿಶೇಷ ತಂಡವು ತನಿಖೆಯನ್ನು ಪ್ರಾರಂಭಿಸಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಫರೀದ್ ಅಹ್ಮದ್ ಶಂಕಿತನಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪಡೆದು ದೋಡಾದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ಮಾಡಲು ಸಂಚು ರೂಪಿಸುತ್ತಿದ್ದ ಎಂದು ತಿಳಿದುಬಂದಿದೆ. ಸಮಯೋಚಿತ ಮತ್ತು ಕ್ಷಿಪ್ರ ಕ್ರಮದಿಂದಾಗಿ ಈ ದುಷ್ಕೃತ್ಯವನ್ನು ವಿಫಲಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
J&K | Doda Police along with security forces have arrested one terrorist, a resident of Koti Doda & recovered one Chinese pistol, two magazines, 14 live cartridges & one mobile phone from his possession. Further investigation into the matter is in progress: Police pic.twitter.com/1RnNAoGFm4
— ANI (@ANI) June 27, 2022