'ಮಹಾ' ಸರ್ಕಾರ ಬಿಕ್ಕಟ್ಟು: 9 ಬಂಡಾಯ ಸಚಿವರ ಖಾತೆಗಳನ್ನು ಇತರ ಶಾಸಕರಿಗೆ ಹಸ್ತಾಂತರಿಸಿದ ಸಿಎಂ ಉದ್ಧವ್ ಠಾಕ್ರೆ
ಮಹಾ ವಿಕಾಸ ಅಘಾಡಿ ಮೈತ್ರಿ ಸರ್ಕಾರದ ರಾಜಕೀಯ ಅಸ್ಥಿರತೆ ಮುಂದುವರಿಯುತ್ತಿದ್ದಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪ್ರಸ್ತುತ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಒಂಬತ್ತು ಬಂಡಾಯ ಸಚಿವರ ಖಾತೆಗಳನ್ನು ಇತರ ಸಚಿವರಿಗೆ ಸೋಮವಾರ ಹಸ್ತಾಂತರಿಸಿದ್ದಾರೆ.
Published: 27th June 2022 01:58 PM | Last Updated: 27th June 2022 02:05 PM | A+A A-

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ
ಮುಂಬೈ: ಮಹಾ ವಿಕಾಸ ಅಘಾಡಿ (MVA) ಮೈತ್ರಿ ಸರ್ಕಾರದ ರಾಜಕೀಯ ಅಸ್ಥಿರತೆ ಮುಂದುವರಿಯುತ್ತಿದ್ದಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪ್ರಸ್ತುತ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಒಂಬತ್ತು ಬಂಡಾಯ ಸಚಿವರ ಖಾತೆಗಳನ್ನು ಇತರ ಸಚಿವರಿಗೆ ಸೋಮವಾರ ಹಸ್ತಾಂತರಿಸಿದ್ದಾರೆ.
ಆಡಳಿತದ ಅನುಕೂಲಕ್ಕಾಗಿ ಬಂಡಾಯ ಸಚಿವರ ಖಾತೆಗಳನ್ನು ಇತರ ಸಚಿವರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕೃತ ಹೇಳಿಕೆ ತಿಳಿಸಿದೆ. ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಪಾಳಯಕ್ಕೆ ಇದುವರೆಗೆ ಒಂಬತ್ತು ಸಚಿವರು ಸೇರಿಕೊಂಡಿದ್ದಾರೆ.
ಶಿವಸೇನೆಯು ಈಗ ಸಿಎಂ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ, ಅನಿಲ್ ಪರಬ್ ಮತ್ತು ಸುಭಾಷ್ ದೇಸಾಯಿ ಸೇರಿದಂತೆ ನಾಲ್ಕು ಸಂಪುಟ ದರ್ಜೆ ಸಚಿವರನ್ನು ಹೊಂದಿದೆ. ಆದಿತ್ಯ ಠಾಕ್ರೆ ಹೊರತುಪಡಿಸಿ ಉಳಿದ ಮೂವರು ಎಂಎಲ್‌ಸಿಗಳು.
ಇದನ್ನೂ ಓದಿ: ರಾಜ್ ಠಾಕ್ರೆ ಜೊತೆ ಏಕನಾಥ್ ಶಿಂಧೆ ಎರಡು ಬಾರಿ ಮಾತುಕತೆ: ಹೆಚ್ಚಿದ ಕುತೂಹಲ
ಶಿವಸೇನಾ ನೇತೃತ್ವದ ತ್ರಿಪಕ್ಷೀಯ ಮಹಾ ವಿಕಾಸ್ ಅಘಾಡಿ (MVA) ಸರ್ಕಾರದಲ್ಲಿ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಪಕ್ಷವು ಬಂಡಾಯಕ್ಕೆ ಮೊದಲು 10 ಕ್ಯಾಬಿನೆಟ್ ದರ್ಜೆಯ ಮಂತ್ರಿಗಳನ್ನು ಹೊಂದಿತ್ತು. ಶಿವಸೇನಾ ಕೋಟಾದಿಂದ ಇಬ್ಬರು ಸೇರಿದಂತೆ ನಾಲ್ವರು ರಾಜ್ಯ ಮಂತ್ರಿಗಳನ್ನು (MoS) ಹೊಂದಿತ್ತು.
ಎಲ್ಲಾ ನಾಲ್ವರು ರಾಜ್ಯ ಸಚಿವರುಗಳು ಗುವಾಹಟಿಯ ಬಂಡಾಯ ಗುಂಪನ್ನು ಸೇರಿಕೊಂಡಿದ್ದಾರೆ.