ಉದ್ಧವ್ ಠಾಕ್ರೆ 52 ಶಾಸಕರನ್ನು ಬಿಟ್ಟರೂ, ಪವಾರ್ ನ್ನು ಬಿಡುವುದಿಲ್ಲ: ಬಂಡಾಯ ಶಾಸಕರು 

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಮ್ಮ 52 ಶಾಸಕರನ್ನು ಬಿಟ್ಟರೂ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಬಿಡುವುದಿಲ್ಲ ಎಂದು ಬಂಡಾಯ ಶಾಸಕರ ಪೈಕಿ ಗುರುತಿಸಿಕೊಂಡಿರುವ ಶಿವಸೇನೆ ಸಚಿವ ಗುಲಾಬ್ ರಾವ್ ಪಾಟೀಲ್ ಹೇಳಿದ್ದಾರೆ. 
ಸಿಎಂ ಉದ್ಧವ್ ಠಾಕ್ರೆ-ಎನ್ ಸಿಪಿ ನಾಯಕ ಶರದ್ ಪವಾರ್
ಸಿಎಂ ಉದ್ಧವ್ ಠಾಕ್ರೆ-ಎನ್ ಸಿಪಿ ನಾಯಕ ಶರದ್ ಪವಾರ್

ಗುವಾಹಟಿ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಮ್ಮ 52 ಶಾಸಕರನ್ನು ಬಿಟ್ಟರೂ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಬಿಡುವುದಿಲ್ಲ ಎಂದು ಬಂಡಾಯ ಶಾಸಕರ ಪೈಕಿ ಗುರುತಿಸಿಕೊಂಡಿರುವ ಶಿವಸೇನೆ ಸಚಿವ ಗುಲಾಬ್ ರಾವ್ ಪಾಟೀಲ್ ಹೇಳಿದ್ದಾರೆ. 

ಶಿವಸೇನೆ ಅಧ್ಯಕ್ಷರ ಮೇಲೆ ನೇರಾನೇರ ವಾಗ್ದಾಳಿ ನಡೆಸಿರುವ ಗುಲಾಬ್ ರಾವ್ ಪಾಟೀಲ್, ಬಂಡಾಯ ಶಾಸಕರು ಅವಕಾಶವಾದಿಗಳಲ್ಲ. ಪಕ್ಷಕ್ಕಾಗಿ ನಾಯಕನಿಗಾಗಿ ಏನನ್ನಾದರೂ ಮಾಡಲು ಸಾಧ್ಯವಾಗದಿದ್ದರೂ ಎಲ್ಲವನ್ನೂ ಮಾಡಿದ್ದೇವೆ ಎಂದು ಹೇಳಿದ್ದಾರೆ. 

ಪಾಟೀಲ್ ಬಂಡಾಯ ಶಾಸಕರ ನಾಯಕ ಏಕ್ ನಾಥ್ ಶಿಂಧೆ ಅವರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದಲ್ಲಿ ಅಧಿಕಾರ ಹಂಚಿಕೊಂಡಿರುವ ಕಾಂಗ್ರೆಸ್-ಎನ್ ಸಿಪಿಯೊಂದಿಗಿನ ಮೈತ್ರಿಯನ್ನು ತೊರೆಯಬೇಕು ಎಂದು ಬಂಡಾಯ ಶಾಸಕರು ಉದ್ಧವ್ ಠಾಕ್ರೆ ಅವರನ್ನು ಆಗ್ರಹಿಸಿದ್ದಾರೆ. 

ಉದ್ಧವ್ ಠಾಕ್ರೆ ಸಿಎಂ ಅಧಿಕೃತ ನಿವಾಸ ವರ್ಷ ವನ್ನು ತೊರೆದರು, 52 ಶಾಸಕರನ್ನು ತೊರೆದರು, ಎಲ್ಲರನ್ನೂ ತೊರೆದರು, ಆದರೆ ಅವರು ಶರದ್ ಪವಾರ್ ನ್ನು ಮಾತ್ರ ತೊರೆಯುವುದಿಲ್ಲ ಎಂದು ಗುಲಾಬ್ ರಾವ್ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com