ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಗೋವಾ ಸಿಎಂ ಪ್ರಮೋದ್ ಸಾವಂತ್ ಮತ್ತು ಆಪ್ ಪಂಜಾಬ್ ಸಿಎಂ ಅಭ್ಯರ್ಥಿ ಭಗವಂತ್ ಮಾನ್
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಗೋವಾ ಸಿಎಂ ಪ್ರಮೋದ್ ಸಾವಂತ್ ಮತ್ತು ಆಪ್ ಪಂಜಾಬ್ ಸಿಎಂ ಅಭ್ಯರ್ಥಿ ಭಗವಂತ್ ಮಾನ್

ಪಂಚರಾಜ್ಯಗಳ ಚುನಾವಣೆ: ಒಂದೆಡೆ ನಾಳೆ ಫಲಿತಾಂಶಕ್ಕೆ ಪಕ್ಷಗಳ ಕಾತರ, ಮತ್ತೊಂದೆಡೆ ಚುನಾವಣೋತ್ತರ ಮೈತ್ರಿಗೆ ಲೆಕ್ಕಾಚಾರ!

ನಾಳೆ ಗುರುವಾರ ಮಾರ್ಚ್ 10, ಪಂಚರಾಜ್ಯಗಳ ಚುನಾವಣೆ ಮತ ಎಣಿಕೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡಗಳಲ್ಲಿ ಸಮೀಕ್ಷೆ ಪ್ರಕಾರ ಅತಂತ್ರ ಸ್ಥಿತಿ ಎದುರಾಗುವ ಸಾಧ್ಯತೆಯಿರುವುದರಿಂದ ಬಿಜೆಪಿ, ಕಾಂಗ್ರೆಸ್, ಆಪ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಎಲ್ಲಾ ಸಾಧ್ಯತೆಗಳ ಬಗ್ಗೆ ಪ್ರಯತ್ನಿಸುತ್ತಿವೆ.
Published on

ನವದೆಹಲಿ: ನಾಳೆ ಗುರುವಾರ ಮಾರ್ಚ್ 10, ಪಂಚರಾಜ್ಯಗಳ ಚುನಾವಣೆ ಮತ ಎಣಿಕೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡಗಳಲ್ಲಿ ಸಮೀಕ್ಷೆ ಪ್ರಕಾರ ಅತಂತ್ರ ಸ್ಥಿತಿ ಎದುರಾಗುವ ಸಾಧ್ಯತೆಯಿರುವುದರಿಂದ ಬಿಜೆಪಿ, ಕಾಂಗ್ರೆಸ್. ಆಪ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಎಲ್ಲಾ ಸಾಧ್ಯತೆಗಳ ಬಗ್ಗೆ ಪ್ರಯತ್ನಿಸುತ್ತಿವೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಫಲಿತಾಂಶ ಘೋಷಣೆಯ ನಂತರ ಯಾವುದೇ ಬಿಕ್ಕಟ್ಟು ಎದುರಾದಲ್ಲಿ ನಿರ್ವಹಣೆಗಾಗಿ ಕಾಂಗ್ರೆಸ್ ತನ್ನ ಕರ್ನಾಟಕ ಘಟಕದ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರನ್ನು ನಿಯೋಜಿಸಿದೆ. ಅವರಿಗೆ ಶೀಘ್ರ ನಿರ್ಧಾರ ಕೈಗೊಳ್ಳುವ ಹೊಣೆಗಾರಿಕೆಯನ್ನು ಹೈಕಮಾಂಡ್ ವಹಿಸಿದೆ.

40 ಸದಸ್ಯ ಬಲದ ಗೋವಾ ಅಸೆಂಬ್ಲಿಯಲ್ಲಿ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ) ಮತ್ತು ಸ್ವತಂತ್ರರ ಬೆಂಬಲ ಪಡೆದು ಬಹುಮತದ 21 ಮ್ಯಾಜಿಕ್ ನಂಬರ್ ಪಡೆಯುವ ಸಾಧ್ಯತೆಯನ್ನು ಪ್ರಮುಖ ಪಕ್ಷಗಳು ನೋಡುತ್ತಿವೆ.

2017 ರಲ್ಲಿ, ಗೋವಾ ವಿಧಾನಸಭೆ ಫಲಿತಾಂಶದ ನಂತರ ಎಂಜಿಪಿ ಬಿಜೆಪಿಗೆ ಬೆಂಬಲವನ್ನು ನೀಡಿತ್ತು, ಆದರೆ ಈ ಬಾರಿ ಅದು ಟಿಎಂಸಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದೆ. 2017 ರಲ್ಲಿ, ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು ಆದರೆ ಬಿಜೆಪಿ ತ್ವರಿತವಾಗಿ ಕಾರ್ಯನಿರ್ವಹಿಸಿದ್ದರಿಂದ ಸರ್ಕಾರ ರಚಿಸಲು ವಿಫಲವಾಯಿತು. MGP, GFP ಮತ್ತು ಸ್ವತಂತ್ರರೊಂದಿಗೆ ಮೈತ್ರಿ ಮಾಡಿಕೊಂಡು ಕ್ಷಿಪ್ರವಾಗಿ ಸರ್ಕಾರ ರಚಿಸಿತ್ತು.

ಎಲ್ಲಾ ಆಯ್ಕೆಗಳನ್ನು ಪರಿಗಣಿಸಲು ಕಾಂಗ್ರೆಸ್ ಗಳು ಮುಕ್ತವಾಗಿದೆ. ಹಿರಿಯ ನಾಯಕರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಪ್ರತಿ ರಾಜ್ಯದ ಪರಿಸ್ಥಿತಿಯನ್ನು ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. 

ಉತ್ತರಾಖಂಡದಲ್ಲಿ, ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೇಲ್ ಮತ್ತು ರಾಜ್ಯಸಭಾ ಸಂಸದ ದೀಪೇಂದರ್ ಹೂಡಾ ಕಾಂಗ್ರೆಸ್ ಬಿಕ್ಕಟ್ಟಿನ ನಿರ್ವಹಣೆಗೆ ಅಲ್ಲಿ ನಿಯೋಜನೆಗೊಂಡಿದ್ದಾರೆ. ಮುಖ್ಯಮಂತ್ರಿ ಪುಶ್ಕರ್ ಸಿಂಗ್ ದಾಮಿ ಬಿಜೆಪಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಸಮೀಕ್ಷೆಯಲ್ಲಿ ಪಂಜಾಬ್‌ನಲ್ಲಿ ಎಎಪಿಗೆ ಪೂರ್ಣ ಬಹುಮತ ನೀಡಿದ ಹೊರತಾಗಿಯೂ, ಕಾಂಗ್ರೆಸ್ ಪವನ್ ಖೇರಾ ಅವರೊಂದಿಗೆ ಅಜಯ್ ಮಾಕನ್ ಅವರನ್ನು ವೀಕ್ಷಕರನ್ನಾಗಿ ಕಳುಹಿಸಿದೆ. ಮಣಿಪುರಕ್ಕೆ ಪಕ್ಷವು ಛತ್ತೀಸ್‌ಗಢದ ಸಚಿವ ಟಿ.ಎಸ್.ಸಿಂಗ್ದೇವ್ ಮತ್ತು ಹಿರಿಯ ನಾಯಕರಾದ ಮುಕುಲ್ ವಾಸ್ನಿಕ್ ಮತ್ತು ವಿನ್ಸೆಂಟ್ ಪಾಲಾ ಅವರನ್ನು ವೀಕ್ಷಕರನ್ನಾಗಿ ನೇಮಿಸಿದೆ.

ಕಾಂಗ್ರೆಸ್ ನ ನಂಬಿಕಸ್ಥ ಬಿಕ್ಕಟ್ಟು ನಿರ್ವಹಣೆಕಾರರು
ರಾಜಸ್ತಾನದಲ್ಲಿ ಸಚಿನ್ ಪೈಲಟ್ ಬಣ ಬಂಡಾಯವೆದ್ದಿದ್ದಾಗ ಅದನ್ನು ಶಮನಗೊಳಿಸಿ ಪರಿಸ್ಥಿತಿ ತಿಳಿಗೊಳಿಸಲು ಡಿ ಕೆ ಶಿವಕುಮಾರ್ ಅವರನ್ನು ಕಳುಹಿಸಲಾಗಿತ್ತು. ಇನ್ನು 2018ರಲ್ಲಿ ನಮ್ಮ ರಾಜ್ಯದಲ್ಲಿ ಶಾಸಕರ ಕುದುರೆ ವ್ಯಾಪಾರವನ್ನು ಪಕ್ಷದಲ್ಲಿ ಸಾಕಷ್ಟು ತಡೆದಿದ್ದರು. ಇದರಿಂದ ಸದನ ಪರೀಕ್ಷೆಗೆ ಮುನ್ನ ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com