
ಕಲುಶಿತ ಗಾಳಿ (ಸಂಗ್ರಹ ಚಿತ್ರ)
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕುಸಿತ ಕಂಡಿದ್ದು, ನೋಯ್ಡಾದಲ್ಲಿ ಅತ್ಯಂತ ಕಳಪೆ ಮಟ್ಟಕ್ಕೆ ಕುಸಿದಿದೆ. ಕಲುಶಿತ ಗಾಳಿಯಿಂದಾಗಿ ದೆಹಲಿಯ ಮಂದಿ ಶ್ವಾಸಕೋಶ, ನ್ಯುಮೋನಿಯಾದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ.
ವಾಯುಮಾಲಿನ್ಯ ಹೆಚ್ಚಳವಾಗುತ್ತಿರುವುದನ್ನು ಆರೋಗ್ಯ ತಜ್ಞರು, ಆರೋಗ್ಯಕ್ಕೆ ಸಂಬಂಧಿಸಿದ ತುರ್ತು ಪರಿಸ್ಥಿತಿ ಎಂದು ಹೇಳಿದ್ದು, ಶ್ವಾಸಕೋಶಕ್ಕೆ ಕಲುಶಿತ ಗಾಳಿ ಸೋಕಿದ ತಕ್ಷಣ ಪರಿಣಾಮ ಬ್ರಲಿದೆ ಎಂದು ಮೇದಾಂತ ಆಸ್ಪತ್ರೆಯಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಚೆಸ್ಟ್ ಸರ್ಜರಿ ಅಧ್ಯಕ್ಷ ಡಾ.ಅರವಿಂದ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕುಸಿತ; ವಾಯುಮಾಲಿನ್ಯ ಕಡಿತಗೊಳಿಸಲು ಮನೆಯಿಂದಲೇ ಕೆಲಸ ಮಾಡಿ ಎಂದ ಸಚಿವ ಗೋಪಾಲ್ ರೈ
ಹೊಗೆ ಶ್ವಾಸಕೋಶಕ್ಕೆ ತಲುಪುತ್ತಿದ್ದಂತೆಯೇ ಶ್ವಾಸನಾಳ ಮತ್ತು ಶ್ವಾಸಕೋಶಗಳು ಉರಿಯೂತದಂತಹ ಸಮಸ್ಯೆಗಳು ಹೆಚ್ಚಾಗಲಿವೆ ಶ್ವಾಸಕೋಶದ ಮೂಲಕ ಕಲುಶಿತ ರಾಸಾಯನಿಕ ಅಂಶಗಳು ರಕ್ತವನ್ನು ಸೇರಿ ಆರೋಗ್ಯ ಹಾಳಾಗಲಿದೆ ಎಂದು ಡಾ.ಕುಮಾರ್ ವಿವರಿಸಿದ್ದಾರೆ.