
ಗುಂಡೇಟಿಗೆ ಬಲಿಯಾದ ಶಿವಸೇನಾ ಮುಖಂಡ ಸುಧೀರ್ ಸೂರಿ
ಅಮೃತಸರ: ಪಂಜಾಬಿನ ಅಮೃತಸರದಲ್ಲಿ ಇಂದು ಹಾಡಹಗಲೇ ಶಿವಸೇನಾ ಮುಖಂಡ ಸುಧೀರ್ ಸೂರಿ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.
ಸೂರಿ ಮತ್ತಿತರ ಪಕ್ಷದ ಕೆಲವು ಮುಖಂಡರು ದೇವಾಲಯವೊಂದರ ಬಳಿ ಪ್ರತಿಭಟನೆ ನಡೆಸುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಸೂರಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಬದುಕುಳಿಯಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
Punjab | Shiv Sena leader Sudhir Suri shot in Amritsar. Police present at the spot, details awaited.
— ANI (@ANI) November 4, 2022
"Shiv Sena leader Sudhir Shri has been shot. We have reached the spot and are still verifying everything. The senior officers will brief you," Police say. pic.twitter.com/otlJ0UXLyL
ಘಟನೆಗೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸಲಾಗಿದ್ದು, ಆತನಿಂದ ಬಂದೂಕನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ. ಪಂಜಾಬ್ ನಲ್ಲಿ ಈ ಹಿಂದೆ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲ ಅವರನ್ನು ತಂಡವೊಂದು ಗುಂಡಿಕ್ಕಿ ಹತ್ಯೆ ಮಾಡಿತ್ತು.