ಹಿಮಾಚಲ ಪ್ರದೇಶ: ದೇಶದ ಮೊದಲ ಮತದಾರ ಶ್ಯಾಮ್ ಶರಣ್ ನೇಗಿ 106ನೇ ವಯಸ್ಸಿನಲ್ಲಿ ನಿಧನ, ಮುಖ್ಯಮಂತ್ರಿ ಸಂತಾಪ

ದೇಶದ ಮೊದಲ ಮತದಾರ (First Voter of India) 106 ವರ್ಷದ ಶ್ಯಾಮ್ ಶರಣ್ (Shyam Saran Negi) ನೇಗಿ ಶನಿವಾರ ಮುಂಜಾನೆ ನಿಧನರಾಗಿದ್ದಾರೆ. ಹಿಮಾಚಲ ಪ್ರದೇಶದ (Himachal Pradesh) ಕಿನ್ನೌರ್ ಜಿಲ್ಲೆಯ ಕಲ್ಪಾದಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
106 ವರ್ಷದ ಶ್ಯಾರ್ ಶರಣ್ ನೇಗಿ
106 ವರ್ಷದ ಶ್ಯಾರ್ ಶರಣ್ ನೇಗಿ

ಶಿಮ್ಲಾ: ದೇಶದ ಮೊದಲ ಮತದಾರ (First Voter of India) 106 ವರ್ಷದ ಶ್ಯಾಮ್ ಶರಣ್ (Shyam Saran Negi) ನೇಗಿ ಶನಿವಾರ ಮುಂಜಾನೆ ನಿಧನರಾಗಿದ್ದಾರೆ. ಹಿಮಾಚಲ ಪ್ರದೇಶದ (Himachal Pradesh) ಕಿನ್ನೌರ್ ಜಿಲ್ಲೆಯ ಕಲ್ಪಾದಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಮೊನ್ನೆ ನವೆಂಬರ್ 2ರಂದು 14ನೇ ವಿಧಾನಸಭೆ ಚುನಾವಣೆ ನಡೆದಿತ್ತು. ಅದರಲ್ಲಿ ಸಹ ಅವರು ಮತ ಚಲಾಯಿಸಿದ್ದು ತಮ್ಮ ಜೀವಿತಾವಧಿಯಲ್ಲಿ 34ನೇ ಬಾರಿ ಮತ ಚಲಾಯಿಸಿದ್ದಾರೆ.  ಕಿನ್ನೌರ್ ಡಿಸಿ ಅಬಿದ್ ಹುಸೇನ್ ಮಾಸ್ಟರ್ ನೇಗಿ ಅವರ ಸಾವನ್ನು ಖಚಿತಪಡಿಸಿದ್ದಾರೆ. ಅವರು ದೇಶದಲ್ಲಿ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಅಂದರೆ 1951ರ ಅಕ್ಟೋಬರ್ 23ರಂದು ಮೊದಲ ಮತ ಚಲಾಯಿಸಿದ್ದರೆಂಬುವುದು ಉಲ್ಲೇಖನೀಯ. 

ಕಳೆದ ಕೆಲವು ದಿನಗಳಿಂದ ಮಾಸ್ಟರ್ ನೇಗಿ ಅವರ ಆರೋಗ್ಯ ಹದಗೆಟ್ಟಿತ್ತು. ಇದರಿಂದಾಗಿ ಮಾಸ್ಟರ್ ನೇಗಿ ಅವರು ನವೆಂಬರ್ 2 ರಂದು ಹಿಮಾಚಲ ವಿಧಾನಸಭಾ ಚುನಾವಣೆಗೆ ಅಂಚೆ ಮತದಾನ ಮೂಲಕ ಮತ ಚಲಾಯಿಸಿದ್ದರು.ನೇಗಿ ಅವರು ಮತ ಚಲಾಯಿಸಿದ್ದನ್ನು ಕಂಡು ಪ್ರಧಾನಿ ಮೋದಿಯವರು ಶ್ಲಾಘಿಸಿ ಟ್ವೀಟ್ ಮಾಡಿದ್ದರು. 

ದೇಶದಲ್ಲಿ ಮೊದಲ ಲೋಕಸಭೆ ಚುನಾವಣೆ ನಡೆದಿದ್ದು 1952ರಲ್ಲಿ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಚುನಾವಣೆ ವೇಳೆ ಭಾರೀ ಹಿಮಪಾತವಾಗುವ ಸಾಧ್ಯತೆ ಇತ್ತು. ಆದ್ದರಿಂದ, ಕಿನ್ನೌರ್‌ನಲ್ಲಿ ಅದರ ಆರು ತಿಂಗಳ ಹಿಂದೆ 1951 ರಲ್ಲಿಯೇ ಮತಗಳನ್ನು ಚಲಾಯಿಸಲಾಯಿತು ಮತ್ತು ಮಾಸ್ಟರ್ ನೇಗಿ ಅವರು ಮೊದಲ ಮತ ಚಲಾಯಿಸಿದರು. 1917 ರಲ್ಲಿ ಜನಿಸಿದ ಶ್ಯಾಮ್ ಶರಣ್ ನೇಗಿ ಅವರು 10 ನೇ ತರಗತಿಯವರೆಗೆ ಶಾಲೆಗೆ ಹೋಗಿದ್ದರು. ಕಲ್ಪದಲ್ಲಿ ಐದನೇ ತರಗತಿಯವರೆಗೆ ಓದಿದರು.

ಇದಾದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ರಾಂಪುರಕ್ಕೆ ಹೋದರು. ರಾಂಪುರವನ್ನು ತಲುಪಲು ಮೂರು ದಿನಗಳು ಕಾಲ್ನಡಿಗೆಯಲ್ಲೇ ಸಾಗಬೇಕಾಯ್ತು. ರಾಂಪುರದಲ್ಲಿ 9ನೇ ತರಗತಿಯವರೆಗೆ ಓದಿದರು. ವಯಸ್ಸಾದ ಕಾರಣ 10ನೇ ತರಗತಿಗೆ ಪ್ರವೇಶ ಸಿಗಲಿಲ್ಲ. ಬಳಿಕ 1940ರಿಂದ 1946ರವರೆಗೆ ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಕಾರ್ಯನಿರ್ವಹಿಸಿದ್ದರು. ಆ ನಂತರ ಶಿಕ್ಷಣ ಇಲಾಖೆಗೆ ಹೋಗಿ ಕಲ್ಪ ಲೋವರ್ ಮಿಡಲ್ ಸ್ಕೂಲ್ ನಲ್ಲಿ ಶಿಕ್ಷಕರಾದರು.

ಮುಖ್ಯಮಂತ್ರಿ ಸಂತಾಪ: ನೇಗಿಯವರ ನಿಧನಕ್ಕೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಸಂತಾಪ ಸೂಚಿಸಿದ್ದಾರೆ. ದೇಶದ ಮೊದಲ ಮತದಾರ ಪ್ರಥಮ ಬಾರಿಗೆ ಮತ್ತು ನಿಧನ ಹೊಂದುವುದಕ್ಕೆ ಎರಡು ದಿನ ಮೊದಲು ಮತದಾನ ಮಾಡಿದ್ದು ಯಾವಾಗಲೂ ಭಾವನಾತ್ಮಕ ವಿಷಯ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com