ಅಂಧೇರಿ ಉಪ ಚುನಾವಣೆ ಫಲಿತಾಂಶ: ಉದ್ಧವ್ ಬಣದ ರುತುಜಾ ಗೆಲುವು, ನೋಟಾಗೆ 2ನೇ ಸ್ಥಾನ

ಮುಂಬೈನ ಅಂಧೇರಿ(ಪೂರ್ವ) ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ 3 ರಂದು ನಡೆದ ಉಪ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಶಿವಸೇನೆ(ಉದ್ಧವ್ ಬಾಳಾಸಾಹೇಬ್ ಠಾಕ್ರೆ)ಯ ಅಭ್ಯರ್ಥಿ ರುತುಜಾ ಲಟ್ಕೆ ಅವರು ಭರ್ಜರಿ ಗೆಲುವು...
ರುತುಜಾ ಲಟ್ಕೆ
ರುತುಜಾ ಲಟ್ಕೆ

ಮುಂಬೈ: ಮುಂಬೈನ ಅಂಧೇರಿ(ಪೂರ್ವ) ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ 3 ರಂದು ನಡೆದ ಉಪ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಶಿವಸೇನೆ(ಉದ್ಧವ್ ಬಾಳಾಸಾಹೇಬ್ ಠಾಕ್ರೆ)ಯ ಅಭ್ಯರ್ಥಿ ರುತುಜಾ ಲಟ್ಕೆ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ನೋಟಾ( ಮೇಲಿನ ಯಾವುದೂ ಇಲ್ಲ) ಎರಡನೇ ಸ್ಥಾನ ಪಡೆದಿದೆ.

ರುತುಜಾ ಲಟ್ಕೆ ಅವರು ಚಲಾವಣೆಯಾದ ಮತಗಳ ಪೈಕಿ ಶೇ.80ಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ. ಶೇಕಡಾ 15 ರಷ್ಟು ಮತ ಪಡೆದ ನೋಟಾ ಇತರ ಆರು ಪಕ್ಷೇತರ ಅಭ್ಯರ್ಥಿಗಳಿಗಿಂತ ಮುಂದಿದೆ.

ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸದಂತಹ ಮತದಾರರಿಗೆ ನೋಟಾ ಆಯ್ಕೆಯನ್ನು ನೀಡಲಾಗಿದೆ.

ಬಾರಿ ಅಂಧೇರಿ(ಪೂರ್ವ) ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಶಿವಸೇನೆಯ ರಮೇಶ್ ಲಟ್ಕೆ ಅವರು ಮೇ ತಿಂಗಳಲ್ಲಿ ನಿಧನರಾಗಿದರು. ಅವರಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿ ರುತುಜಾ ಲಟ್ಕೆ ಗೆಲುವು ಸಾಧಿಸಿದ್ದಾರೆ.

2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ 56 ಸ್ಥಾನಗಳನ್ನು ಗೆದ್ದಿತ್ತು. ಕಳೆದ ಜೂನ್‌ನಲ್ಲಿ, ಏಕನಾಥ್ ಶಿಂಧೆ ನೇತೃತ್ವದ 40 ಸೇನಾ ಶಾಸಕರು ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದರು, ಇದರ ಪರಿಣಾಮವಾಗಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ (MVA) ಪತನವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com