ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯ ತಗ್ಗಿದ ಹಿನ್ನೆಲೆಯಲ್ಲಿ ನ.09 ರಿಂದ ಪ್ರಾಥಮಿಕ ತರಗತಿಗಳು ಪುನಾರಂಭಗೊಳ್ಳಲಿದ್ದು ಮನೆಯಿಂದ ಕೆಲಸ ಮಾಡುತ್ತಿದ್ದ ಶೇ.50 ರಷ್ಟು ಸರ್ಕಾರಿ ಸಿಬ್ಬಂದಿಗಳನ್ನು ಮರಳಿ ಕಚೇರಿಗೆ ಆಗಮಿಸುವಂತೆ ಸೂಚನೆ ನೀಡಿದೆ.
ದೆಹಲಿ ಪರಿಸರ ಸಚಿವ ಗೋಪಾಲ್ ರೈ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು, ದೆಹಲಿಯ ವಾಯುಮಾಲಿನ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಬೆಳೆಗಳ ತ್ಯಾಜ್ಯಗಳಿಗೆ ಬೆಂಕಿ ಇಡುವ ಪ್ರಕರಣಗಳೂ ಕಡಿಮೆಯಾಗಿವೆ. ಆದ್ದರಿಂದ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ ನ 4 ನೇ ಹಂತದ ಅಡಿಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಹಿಂಪಡೆಯುತ್ತಿರುವುದಾಗಿ ಹೇಳಿದ್ದಾರೆ.
ಕಳೆದ 2 ದಿನಗಳಿಂದ ದೆಹಲಿ-ಎನ್ ಸಿಆರ್ ಪ್ರದೇಶದಲ್ಲಿ ವಾಯುಗುಣಮಟ್ಟ ಸುಧಾರಣೆಯಾಗಲಿದ್ದು, ನಿರ್ಬಂಧಗಳನ್ನು ತೆರವುಗೊಳಿಸಬಹುದು ಎಂದು ಕೇಂದ್ರದ ವಾಯುಗುಣಮಟ್ಟ ಸಮಿತಿ ಹೇಳಿತ್ತು.
Advertisement