ಇ-ತ್ಯಾಜ್ಯ
ಇ-ತ್ಯಾಜ್ಯ

ಇ-ತ್ಯಾಜ್ಯ ಪಟ್ಟಿ ಈಗ ಇನ್ನಷ್ಟು ಉದ್ದ, 106 ವಸ್ತುಗಳು ಸೇರ್ಪಡೆ 

ಕೇಂದ್ರ ಸರ್ಕಾರ ಇ-ತ್ಯಾಜ್ಯ ವಿಭಾಗಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಘೋಷಣೆ ಮಾಡಿದ್ದು, ಇ-ತ್ಯಾಜ್ಯದ ಪಟ್ಟಿಗೆ ಬರುವ ವಸ್ತುಗಳ ಸಂಖ್ಯೆಯನ್ನು ಹೆಚ್ಚಿಸಿದೆ. 

ಬೆಂಗಳೂರು: ಕೇಂದ್ರ ಸರ್ಕಾರ ಇ-ತ್ಯಾಜ್ಯ ವಿಭಾಗಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಘೋಷಣೆ ಮಾಡಿದ್ದು, ಇ-ತ್ಯಾಜ್ಯದ ಪಟ್ಟಿಗೆ ಬರುವ ವಸ್ತುಗಳ ಸಂಖ್ಯೆಯನ್ನು ಹೆಚ್ಚಿಸಿದೆ. 

ನಂ.2 ರಂದು ಪರಿಸರ ಸಚಿವಾಲಯದಿಂದ ಪ್ರಕಟಿಸಲಾಗಿರುವ ಗೆಝೆಟ್ ನೊಟಿಫಿಕೇಶನ್ ಪಟ್ಟಿಯಲ್ಲಿ ಇ-ತ್ಯಾಜ್ಯದ ವಸ್ತುಗಳನ್ನು 21 ರಿಂದ 106 ವರೆಗೆ ಏರಿಕೆ ಮಾಡಲಾಗಿದೆ. 

ಇ-ತ್ಯಾಜ್ಯ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಈ ನೋಟಿಫಿಕೇಶನ್ ಮಹತ್ವ ಪಡೆದುಕೊಂಡಿದೆ. ಮುಂದಿನ ಆರ್ಥಿಕ ವರ್ಷದಿಂದ ಹೊಸ ಇ-ತ್ಯಾಜ್ಯ ನಿಯಮ, 2022 ಜಾರಿಗೆ ಬರಲಿದ್ದು, ಫ್ರೀಜರ್ಸ್, ವ್ಯಾಕ್ಯೂಮ್ ಕ್ಲೀನರ್, ಡಿಷ್ ವಾಷಿಂಗ್ ಮಷಿನ್ ಗಳು, ಮೈಕ್ರೋವೇವ್, ಮೋಡೆಮ್, ಜಿಪಿಎಸ್, ರೌಟರ್, ಕಾರ್ಡ್ ಲೆಸ್ ಫೋನ್, ವಿಡಿಯೋ ಕ್ಯಾಮರಾ, ಸೇರಿದಂತೆ 86 ವಸ್ತುಗಳನ್ನು ಇ-ತ್ಯಾಜ್ಯ ವಿಭಾಗಕ್ಕೆ ಸೇರಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com