ಕ್ವಾರಂಟೈನ್ ಬಳಿಕ 2 ಚೀತಾಗಳು ದೊಡ್ಡ ಆವರಣಕ್ಕೆ ಬಿಡುಗಡೆ, 24 ಗಂಟೆಗಳಲ್ಲೇ ಮೊದಲ ಬೇಟೆ

ನಮೀಬಿಯಾದಿಂದ ಭಾರತದ ಮಧ್ಯ ಪ್ರದೇಶಕ್ಕೆ ತರಲಾಗಿರುವ 8 ಚೀತಾಗಳ ಪೈಕಿ 2 ಚೀತಾಗಳನ್ನು ಕಡ್ದಾಯ ಕ್ವಾರಂಟೈನ್ ಮುಗಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಕಾಡಿನ ದೊಡ್ಡ ಆವರಣಕ್ಕೆ ಬಿಡಲಾಗಿದೆ
ಚೀತಾ (ಸಂಗ್ರಹ ಚಿತ್ರ)
ಚೀತಾ (ಸಂಗ್ರಹ ಚಿತ್ರ)

ಭೋಪಾಲ್: ನಮೀಬಿಯಾದಿಂದ ಭಾರತದ ಮಧ್ಯ ಪ್ರದೇಶಕ್ಕೆ ತರಲಾಗಿರುವ 8 ಚೀತಾಗಳ ಪೈಕಿ 2 ಚೀತಾಗಳನ್ನು ಕಡ್ದಾಯ ಕ್ವಾರಂಟೈನ್ ಮುಗಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಕಾಡಿನ ದೊಡ್ಡ ಆವರಣಕ್ಕೆ ಬಿಡಲಾಗಿದೆ. ಕಾಡಿಗೆ ಮುಕ್ತ ಪ್ರವೇಶ ದೊರೆತ 24 ಬೆನ್ನಲ್ಲೇ ಚೀತಾ ತಮ್ಮ ಮೊದಲ ಬೇಟೆಯನ್ನು ಹಿಡಿದಿವೆ. 

ಕುನು ರಾಷ್ಟ್ರೀಯ ಉದ್ಯಾನದಲ್ಲಿ ಸೆಪ್ಟೆಂಬರ್ ಮಧ್ಯಭಾಗದಲ್ಲಿ ಚೀತಾಗಳನ್ನು ಬಿಡಲಾಗಿತ್ತು. ಅವು ಇಲ್ಲಿನ ಹವಾಮಾನ ಹಾಗೂ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗುವವರೆಗೂ ಅವುಗಳ ಮೇಲೆ ನಿಗಾ ವಹಿಸುವುದಕ್ಕಾಗಿ ಚೀತಾಗಳನ್ನು ಕಾಡಿನಲ್ಲೇ ನಿರ್ದಿಷ್ಟ ಪ್ರದೇಶದಲ್ಲಿರಿಸಲಾಗಿತ್ತು. ಈಗ 2 ಚೀತಾಗಳನ್ನು ಕಾಡಿನ ದೊಡ್ಡ ಪ್ರದೇಶಕ್ಕೆ ಬಿಡಲಾಗಿದೆ.

ಈ 2 ಚೀತಾಗಳು ದೊಡ್ಡ ಪ್ರದೇಶಕ್ಕೆ ಬಿಟ್ಟ 24 ಗಂಟೆಗಳಲ್ಲಿ ಬೇಟೆಯನ್ನು ಪಡೆದಿರುವುದರ ಬಗ್ಗೆ ಪಿಟಿಐ ವರದಿ ಪ್ರಕಟಿಸಿದೆ. 

ಚೀತಾಗಳನ್ನು ಕಾಡಿನ ಪ್ರದೇಶಕ್ಕೆ ಮುಕ್ತಗೊಳಿಸಲಾಗಿರುವ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಚೀತಾಗಳು ಆರೋಗ್ಯವಾಗಿದೆ ಎಂಬುದನ್ನು ತಿಳಿದು ಸಂತಸವಾಯಿತು ಎಂದು ಹೇಳಿದ್ದಾರೆ. ಚೀತಾಗಳನ್ನು ಹಂತ ಹಂತವಾಗಿ ವನ್ಯ ಜೀವಿಗಳಿರುವೆಡೆಗೆ ಬಿಡುಗಡೆ ಮಾಡಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com