ಭೀಮಾ ಕೊರೆಗಾಂವ್ ಪ್ರಕರಣದ ಆರೋಪಿ ಸಂಭಾಜಿ ರಾವ್ ಬಿಡೆ, ಸುಧಾ ಮೂರ್ತಿ ಭೇಟಿ

ಲೇಖಕಿ ಹಾಗೂ ಜನೋಪಕಾರಿ ಸುಧಾ ಮೂರ್ತಿ ಅವರು ಸೋಮವಾರ ಶಿವ ಪ್ರತಿಷ್ಠಾನದ ಸ್ಥಾಪಕ ಹಾಗೂ ಭೀಮಾ ಕೊರೆಗಾಂವ್ ಪ್ರಕರಣದ ಪ್ರಮುಖ ಆರೋಪಿ ಸಾಂಬಾಜಿ ರಾವ್ ಬಿಡೆ ಅವರನ್ನು ಭೇಟಿಯಾಗಿದ್ದಾರೆ. 
ಸುಧಾ ಮೂರ್ತಿ, ಸಂಭಾಜಿ ರಾವ್ ಬಿಡೆ
ಸುಧಾ ಮೂರ್ತಿ, ಸಂಭಾಜಿ ರಾವ್ ಬಿಡೆ

ಸಾಂಗ್ಲಿ: ಲೇಖಕಿ ಹಾಗೂ ಜನೋಪಕಾರಿ ಸುಧಾ ಮೂರ್ತಿ ಅವರು ಸೋಮವಾರ ಶಿವ ಪ್ರತಿಷ್ಠಾನದ ಸ್ಥಾಪಕ ಹಾಗೂ ಭೀಮಾ ಕೊರೆಗಾಂವ್ ಪ್ರಕರಣದ ಪ್ರಮುಖ ಆರೋಪಿ ಸಾಂಬಾಜಿ ರಾವ್ ಬಿಡೆ ಅವರನ್ನು ಭೇಟಿಯಾಗಿದ್ದಾರೆ. 

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಧಾ ಮೂರ್ತಿ ಅವರು, ಸಾಂಬಾಜಿ ರಾವ್ ಬಿಡೆ ಅವರ ಆಶೀರ್ವಾದ ಕೋರಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ. 

ಪ್ರಸಿದ್ಧ ಲೇಖಕಿಯಾಗಿರುವ ಸುಧಾ ಮೂರ್ತಿ ಇಂಗ್ಲೀಷ್ ಹಾಗೂ ಕನ್ನಡ ಸಾಹಿತ್ಯದಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ. ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥರಾಗಿದ್ದ ಸುಧಾ ಮೂರ್ತಿ ಡಿಸೆಂಬರ್ 31, 2021ರಲ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದರು. 

ಸಾಂಬಾಜಿ ರಾವ್ ಬಿಡೆ 2018 ಜನವರಿ 1 ರಂದು ನಡೆದಿದ್ದ ಭೀಮಾ ಕೊರೆಗಾಂವ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಈ ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದರು, 10 ಪೊಲೀಸರು ಸೇರಿದಂತೆ ಅನೇಕ ಮಂದಿ ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com