ಮಹಾರಾಷ್ಟ್ರ: 4ನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ, ಸಂಜೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ರಾಹುಲ್ ಭಾಷಣ

ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ಮಹಾರಾಷ್ಟ್ರದಲ್ಲಿ ಇಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸಂಜೆ ನಾಂದೇಡ್ ಜಿಲ್ಲೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ
ಯಾತ್ರೆಯಲ್ಲಿ ಮಕ್ಕಳೊಂದಿಗೆ ಹೆಜ್ಜೆ ಹಾಕುತ್ತಿರುವ  ರಾಹುಲ್ ಗಾಂಧಿ
ಯಾತ್ರೆಯಲ್ಲಿ ಮಕ್ಕಳೊಂದಿಗೆ ಹೆಜ್ಜೆ ಹಾಕುತ್ತಿರುವ ರಾಹುಲ್ ಗಾಂಧಿ

ನಾಂದೇಡ್: ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ಮಹಾರಾಷ್ಟ್ರದಲ್ಲಿ ಇಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸಂಜೆ ನಾಂದೇಡ್ ಜಿಲ್ಲೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಾಂದೇಡ್ ನ ಕಾಪ್ಸಿ ಚೌಕದಿಂದ ಇಂದು ಬೆಳಗ್ಗೆ 6 ಗಂಟೆಯಿಂದ ರಾಹುಲ್ ಗಾಂಧಿ ಯಾತ್ರೆ ಆರಂಭಿಸಿದರು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನರು ರಾಹುಲ್  ಅವರಿಗೆ ಬೆಂಬಲ ವ್ಯಕ್ತಪಡಿಸಿದರು.  

ಯಾತ್ರೆ ವೇಳೆಯಲ್ಲಿ ರಾಹುಲ್ ಜನರನ್ನು ಹತ್ತಿರ ಕರೆದು, ಅವರೊಂದಿಗೆ ಮಾತನಾಡಿದರು. ಇಂದು ನಾಂದೇಡ್ ನಗರ, ದೇಗ್ಲೂರ್ ಮತ್ತು ಅರ್ಧಾಪುರದಲ್ಲಿ ಯಾತ್ರೆ ನಡೆಯಲಿದ್ದು, ನಾಳೆ ಹಿಂಗೂಲಿ ತಲುಪಲಿದೆ. ಬುಧವಾರ ಒಟ್ಟು 24 ಕಿಮೀ ದೂರ ರಾಹುಲ್ ಗಾಂಧಿ ಯಾತ್ರೆ ನಡೆಸಿದರು. ನವೆಂಬರ್ 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೋಟ್ ಅಮಾನ್ಯೀಕರಣ ಮಾಡುವ ಮೂಲಕ ಆರ್ಥಿಕ ಸುನಾಮಿಯನ್ನು ಸೃಷ್ಟಿಸಿದರು ಎಂದು ರಾಹುಲ್ ಆರೋಪಿಸಿದರು. 

ಇಂದು ಸಂಜೆ ನಾಂದೇಡ್ ನಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್ ಸಿಪಿ ಮುಖಂಡರಾದ ಸುಪ್ರಿಯಾ ಸುಳೆ, ಜೀತೇಂದ್ರ ಔದ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಶಿವಸೇನ ಮುಖಂಡ ಆದಿತ್ಯ ಠಾಕ್ರೆ ಶುಕ್ರವಾರ ರಾಹುಲ್ ಗಾಂಧಿ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com