ಗುಜರಾತ್ ಚುನಾವಣೆ: ಕೈ ಜೊತೆ ಮೈತ್ರಿ ಮಾಡಿಕೊಂಡ ಎನ್ ಸಿಪಿಗೆ 3 ಸೀಟು

ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಮತ್ತು ಎನ್ ಸಿಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಇದರಿಂದಾಗಿ ರಾಜ್ಯದ ಒಟ್ಟು 182 ಸ್ಥಾನಗಳ ಪೈಕಿ 3 ಕ್ಷೇತ್ರಗಳಲ್ಲಿ ಎನ್ ಸಿಪಿ ಸ್ಪರ್ಧಿಸಲಿದೆ. ಉಭಯ ಪಕ್ಷಗಳ ಮುಖಂಡರು ಶುಕ್ರವಾರ ಇದನ್ನು ಪ್ರಕಟಿಸಿದ್ದಾರೆ.
ಎನ್ ಸಿಪಿ ಮುಖಂಡರಾದ ಸುಪ್ರೀಯಾ ಸುಳೆ ಮತ್ತಿತರೊಂದಿಗೆ ರಾಹುಲ್ ಗಾಂಧಿ
ಎನ್ ಸಿಪಿ ಮುಖಂಡರಾದ ಸುಪ್ರೀಯಾ ಸುಳೆ ಮತ್ತಿತರೊಂದಿಗೆ ರಾಹುಲ್ ಗಾಂಧಿ

ಅಹಮದಾಬಾದ್: ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಮತ್ತು ಎನ್ ಸಿಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಇದರಿಂದಾಗಿ ರಾಜ್ಯದ ಒಟ್ಟು 182 ಸ್ಥಾನಗಳ ಪೈಕಿ 3 ಕ್ಷೇತ್ರಗಳಲ್ಲಿ ಎನ್ ಸಿಪಿ ಸ್ಪರ್ಧಿಸಲಿದೆ. ಉಭಯ ಪಕ್ಷಗಳ ಮುಖಂಡರು ಶುಕ್ರವಾರ ಇದನ್ನು ಪ್ರಕಟಿಸಿದ್ದಾರೆ.

2017ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎನ್ ಸಿಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಎನ್ ಸಿಪಿಯ ಕಂಧಲ್ ಜಡೇಜಾ ಮಾತ್ರ ಗೆಲುವು ಸಾಧಿಸಿದ್ದರು. ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿಯೊಂದಿಗೆ ಎನ್ ಸಿಪಿ ಪೈಪೋಟಿ ನಡೆಸಲಿದೆ ಎಂದು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಠಾಕೂರ್ ಹೇಳಿದರು. 

ಮೈತ್ರಿ ಭಾಗವಾಗಿ ಎನ್‌ಸಿಪಿ ಉಮ್ರೇತ್ (ಆನಂದ್ ಜಿಲ್ಲೆ) ನರೋಡಾ (ಅಹಮದಾಬಾದ್) ಮತ್ತು ದೇವಗಢ್ ಬರಿಯಾ (ದಹೋಡ್ ಜಿಲ್ಲೆ) ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಈ ಮೂವರು ಕ್ಷೇತ್ರಗಳು ಸದ್ಯ ಆಡಳಿತಾರೂಢ ಬಿಜೆಪಿ ವಶದಲ್ಲಿದೆ.  

ಯುಪಿಎ-1 ಮತ್ತು 2ರಲ್ಲಿ ರಾಷ್ಟ್ರಮಟ್ಟದಲ್ಲಿ ನಮ್ಮೊಂದಿಗಿದ್ದ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಹೇಳಿದ ಠಾಕೂರ್,  125 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಎನ್‌ಸಿಪಿ ಬೆಂಬಲ ನೀಡಲಿದೆ  ಎಂದು ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಟೇಲ್ ಬೋಸ್ಕಿ ಸುದ್ದಿಗಾರರಿಗೆ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com