ಗುಜರಾತ್ ನ 18 ಗ್ರಾಮಗಳಲ್ಲಿ ವಿಧಾನಸಭಾ ಚುನಾವಣೆಗೆ ಬಹಿಷ್ಕಾರ!
ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಗುಜರಾತ್ ನಲ್ಲಿ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸಿದ್ದರೆ, ನವ್ಸಾರಿಯ ಅಂಚೆಲಿ ಹಾಗೂ 17 ಇನ್ನಿತರ ಗ್ರಾಮಗಳು ಚುನಾವಣೆಯನ್ನು ಬಹಿಷ್ಕರಿಸಿವೆ.
Published: 13th November 2022 07:01 PM | Last Updated: 13th November 2022 07:01 PM | A+A A-

ಚುನಾವಣೆ (ಸಂಗ್ರಹ ಚಿತ್ರ)
ಅಹ್ಮದಾಬಾದ್: ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಗುಜರಾತ್ ನಲ್ಲಿ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸಿದ್ದರೆ, ನವ್ಸಾರಿಯ ಅಂಚೆಲಿ ಹಾಗೂ 17 ಇನ್ನಿತರ ಗ್ರಾಮಗಳು ಚುನಾವಣೆಯನ್ನು ಬಹಿಷ್ಕರಿಸಿವೆ.
ಆಡಳಿತಾರೂಢ ಬಿಜೆಪಿಯೂ ಸೇರಿದಂತೆ ಯಾವುದೇ ಪಕ್ಷದ ನಾಯಕರಿಗೂ ಚುನಾವಣಾ ಪ್ರಚಾರಕ್ಕೆ ಪ್ರವೇಶವಿಲ್ಲ ಎಂದು ತಮ್ಮ ಗ್ರಾಮಗಳಲ್ಲಿ ಫಲಕಗಳನ್ನು ಹಾಕಿದ್ದಾರೆ.
ಅಂಚೆಲಿ ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ರೈಲುಗಳನ್ನು ನಿಲ್ಲಿಸಬೇಕೆಂಬ ಗ್ರಾಮಸ್ಥರ ಬೇಡಿಕೆ ಇನ್ನೂ ಈಡೇರದೇ ಇರುವುದು ಚುನಾವಣೆಯನ್ನು ಬಹಿಷ್ಕರಿಸುವುದಕ್ಕೆ ಪ್ರಮುಖ ಕಾರಣವಾಗಿದೆ.
ಅಂಚೆಲಿ ರೈಲ್ವೆ ನಿಲ್ದಾಣದಲ್ಲಿ ಟ್ರೈನ್ ಇಲ್ಲ ವೋಟೂ ಇಲ್ಲ ಎಂಬ ಬ್ಯಾನರ್ ನ್ನು ಅಳವಡಿಸಲಾಗಿದೆ. ಬಿಜೆಪಿ ಅಥವಾ ಬೇರೆ ಯಾವುದೇ ರಾಜಕೀಯ ಪಕ್ಷಗಳೂ ಚುನಾವಣಾ ಪ್ರಚಾರಕ್ಕೆ ಬರಬಾರದು. ನಮ್ಮ ಬೇಡಿಕೆ ಈಡೇರಿಲ್ಲ ಆದ್ದರಿಂದ ನಾವು ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಕೋವಿಡ್-19 ಗೂ ಮುನ್ನ ಈ ಭಾಗದಲ್ಲಿ ರೈಲುಗಳು ನಿಲ್ಲುತ್ತಿದ್ದವು. ಈ ಪ್ರದೇಶದಲ್ಲಿ ನಿರಂತರವಾಗಿ ರೈಲಿನಲಿ ಸಂಚರಿಸುತ್ತಿದ್ದ ವ್ಯಕ್ತಿಗಳು ಈಗ ಖಾಸಗಿ ವಾಹನಗಳಲ್ಲಿ ಓಡಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.