ಪ್ರಿಯತಮೆ ಕತ್ತು ಸೀಳಿ ಹತ್ಯೆ! ದೆಹಲಿಯ ಶ್ರದ್ಧಾ ಹತ್ಯೆ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಮತ್ತೊಂದು ಹೇಯ ಕೃತ್ಯ
ದೆಹಲಿಯಲ್ಲಿ ಶ್ರದ್ಧಾ ಎಂಬ ಯುವತಿಯನ್ನು ಆಕೆಯ ಪ್ರಿಯತಮನೇ ಹತ್ಯೆ ಮಾಡಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದ ಘಟನೆಯ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಇಂಥಹದ್ದೇ ಮತ್ತೊಂದು ಭೀಭತ್ಸ ಘಟನೆ ವರದಿಯಾಗಿದೆ.
Published: 16th November 2022 09:00 PM | Last Updated: 17th November 2022 01:55 PM | A+A A-

ಪ್ರಿಯತಮೆ ಕತ್ತು ಸೀಳಿ ಹತ್ಯೆ ಮಾಡಿದ ವ್ಯಕ್ತಿ
ಭೋಪಾಲ್: ದೆಹಲಿಯಲ್ಲಿ ಶ್ರದ್ಧಾ ಎಂಬ ಯುವತಿಯನ್ನು ಆಕೆಯ ಪ್ರಿಯತಮನೇ ಹತ್ಯೆ ಮಾಡಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದ ಘಟನೆಯ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಇಂಥಹದ್ದೇ ಮತ್ತೊಂದು ಭೀಭತ್ಸ ಘಟನೆ ವರದಿಯಾಗಿದೆ.
ಭೋಪಾಲ್ ನಲ್ಲಿ ವ್ಯಕ್ತಿಯೋರ್ವ ತನ್ನ ಗೆಳತಿಯನ್ನು ಕತ್ತು ಸೀಳಿ ಹತ್ಯೆ ಮಾಡಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ.
ವೀಡಿಯೋದಲ್ಲಿ ವ್ಯಕ್ತಿ ತನ್ನ ಹೇಯ ಕೃತ್ಯವನ್ನು ಹೇಳಿಕೊಂಡಿದ್ದು, ತನಗೆ ಗೆಳತಿ ಮೋಸ ಮಾಡಿದ್ದಳು ಎಂದು ಹೇಳಿದ್ದಾನೆ. ಮೃತಪಟ್ಟ ಮಹಿಳೆಯ ಸಾಮಾಜಿಕ ಜಾಲತಾಣ ಖಾತೆಯನ್ನು ಕೊಲೆಪಾತಕಿ ಬಳಸಿದ್ದು, ಪ್ರಾರಂಭದಲ್ಲಿ ತಾನು ಹತ್ಯೆ ಮಾಡಿದ್ದನ್ನು ಹೇಳಿರುವ ವೀಡಿಯೋ ಹಾಕಿದ್ದ ಆ ಬಳಿಕ ಅದನ್ನು ಡಿಲೀಟ್ ಮಾಡಿದ್ದಾನೆ. ಆ ಬಳಿಕ ಮತ್ತೊಂದು ವೀಡಿಯೋ ಅಪ್ ಲೋಡ್ ಮಾಡಿದ್ದಾನೆ.
ಮೇಖಲ್ ರೆಸಾರ್ಟ್ ನಲ್ಲಿ ನಂ.08 ರಂದು ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಮಹಿಳೆಯನ್ನು ಹತ್ಯೆ ಮಾಡಿದ ವ್ಯಕ್ತಿ ಅಭಿಜಿತ್ ಪಾಟೀದಾರ್ ಗಾಗಿ ಪೊಲೀಸರು ಶೋಧಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
21 ವರ್ಷದ ಶಿಲ್ಪಾ ಮಿಶ್ರಾ ಹತ್ಯೆಗೀಡಾದ ಮಹಿಳೆಯಾಗಿದ್ದಾರೆ. ಬೆಡ್ ಶೀಡ್ ನಲ್ಲಿ ಮುಚ್ಚಿದ್ದ ಮಹಿಳೆಯ ಶವವನ್ನು ವೀಡಿಯೋದಲ್ಲಿ ತೋರಿಸಿದ್ದ ವ್ಯಕ್ತಿ ಆಕೆಗೆ ತನಗೆ ಮೋಸ ಮಾಡದಂತೆ ಹೇಳಿರುವುದು ದಾಖಲಾಗಿದೆ.